Featured StoryUdupi

ಆಗಸ್ಟ್ 2 ರಂದು ಮಣಿಪುರ ಹಿಂಸಾಚಾರ ಖಂಡಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ – ಸುದ್ದಿಗೋಷ್ಟಿ

ಉಡುಪಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಆಗಸ್ಟ್ 2 ರಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದ್ದು ಈ ಕುರಿತು ಇಂದು ಸಮಾನ ಸಮಾಸ್ಕ ವೇದಿಕೆ ವತಿಯಿಂದ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಾನ ಮನಸ್ಕ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಶಾಂತ್ ಜತ್ತನ್,”ಮಣಿಪುರದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಈ ಪ್ತತಿಭಟನೆಯ ಮುಖ್ಯ ಉದ್ದೇಶ ಹಿಂಸಾಚಾರವನ್ನು ಖಂಡಿಸುವುದರೊಂದಿಗೆ ಮಹಿಳೆಯರ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುವುದಾಗಿದೆ ಎಂದರು.

ನಮ್ಮ ಪ್ರಧಾನಿಯನ್ನು ವಿಶ್ವಗುರು ಎಂದು ಹೇಳುತ್ತೇವೆ. ಎಲ್ಲ ಕಡೆ ಶಾಂತಿಯ ಕುರಿತು ಮಾತನಾಡುತ್ತಾರೆ. ಆದರೆ ನಮ್ಮ‌ ದೇಶದಲ್ಲಿ ನಡೆದ ದೌರ್ಜನ್ಯಗಳ ಕುರಿತು ನೂರು ದಿನವಾದರೂ ಪ್ರಧಾನಿ ಮೂರೇ ಶಬ್ದದಲ್ಲಿ ಮಾತನಾಡುತ್ತಾರೆ. ಹಾಗಾದರೆ ಅವರ ಉದ್ದೇಶವೇನು? ಎಂದು ಪ್ರಶ್ನಿಸಿದರು. ಮಣಿಪುರದಲ್ಲಿ ನಡೆಯುತ್ತಿರುವುದು ಕೇವಲ ಕ್ರೈಸ್ತರ ಮೇಲಿನ ದೌರ್ಜನ್ಯ ಅಲ್ಲ ಇದು ಮಾನವ ಹಕ್ಕುಗಳ ಉಲ್ಲಂಘನೆ‌ ಎಂದರು.ಕಾಲ್ನಡಿಗೆ ಜಾಥದಲ್ಲಿ ಏಳು ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸುತ್ತಾರೆ‌ ಎಂದರು.

ಮದರ್ ಆಫ್ ಸಾರೋಸ್ ಚರ್ಚ್ ನಿಂದ ಸರ್ವಿಸ್ ಬಸ್ ಕೋರ್ಟ್ ರಸ್ತೆಯಾಗಿ ಮೆರವಣಿಗೆ ಹೊರಡಲಿದೆ. ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ ಸಮಾರೋಪ ನಡೆಯಲಿದೆ‌ ಪ್ರತಿಭಟನಾ ಸಭೆಯನ್ನುದ್ದೇಶಿಸು ಖ್ಯಾತ ಚಿಂತಕರಾದ ಶಿವಸುಂದರ್ ಮಾತನಾಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್ ಜತ್ತನ್ , ಫಾ.ಡಿನ್ನಿಸ್ ಡೇಸಾ, ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ನಾಗೇಶ್ ಉದ್ಯಾವರ,ಪ್ರೊ.ಫಣಿರಾಜ್,,ರೋನಾಲ್ಡೊ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button