NationalFeatured Story

ಸಂಸದ ದಾನೀಶ್ ಅಲಿಯನ್ನು ಅಧಿವೇಶನದಲ್ಲೇ ಭಯೋತ್ಪಾದಕ ಎಂದು ಹೀಯಾಳಿಸಿದ ಬಿಜೆಪಿ ಸಂಸದ ರಮೇಶ್ ಬಿಧುರಿ

 

ನವದೆಹಲಿ: ನೂತನ ಸಂಸತ್ ಭವನದಲ್ಲಿ ಗುರುವಾರ ರಾತ್ರಿ ಮುಕ್ತಾಯಗೊಂಡ ವಿಶೇಷ ಅಧಿವೇಶನದಲ್ಲಿ ಬಿಎಸ್‌ಪಿಯ ಮುಸ್ಲಿಂ ಸಂಸದ ದಾನಿಶ್ ಅಲಿಯನ್ನು ಬಿಜೆಪಿಯ ಸಂಸದ ರಮೇಶ್ ಬಿಧುರಿ ‘ಭಯೋತ್ಪಾದಕ’ ಎಂದು ಸಭಾಪತಿ ಎದುರೇ ನಿಂದಿಸಿರುವ ಘಟನೆ ವರದಿಯಾಗಿದೆ.

ಬಹುಜನ ಸಮಾಜ ಪಕ್ಷದ ದಾನಿಶ್ ಅಲಿ ಅವರನ್ನು “ಯೇ ಉಗ್ರವಾದಿ, ಯೇ ಆತಂಕ್ವಾದಿ, ಮುಲ್ಲಾ ಆತಂಕವಾದಿ, ಭರ್ವಾ ಮತ್ತು ಕತ್ವಾ ಎಂದು ಹಿಂದಿಯಲ್ಲಿ ಉಲ್ಲೇಖಿಸಿ, ಅವಮಾನಗೈದಿದ್ದಾರೆ. ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗಿರುವ ವಿಡಿಯೋ, ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ವೈರಲಾಗಿದೆ.

ಈ ವೈರಲ್ ವೀಡಿಯೋ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button