
Chikkamagaluru
ಚಿಕ್ಕಮಂಗಳೂರು : ಸಾಲಬಾಧೆ ತಾಳಲಾಗದೆ ರೈತ ಆತ್ಮಹತ್ಯೆ
ಚಿಕ್ಕಮಗಳೂರು: ಸಾಲಬಾಧೆ ತಾಳಲಾಗದೆ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ರೈತ ಮಹಿಳೆಯನ್ನು ಹನುಮಮ್ಮ (75)ಎನ್ನಲಾಗಿದೆ. ಇವರು 3 ಎಕರೆ 30 ಗುಂಟೆಯ ಹೊಲದಲ್ಲಿ ಜೋಳ, ರಾಗಿ ಬಿತ್ತನೆ ಮಾಡಿದ್ದರು.ಆದರೆ ಈವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತಿದ ಬೆಳೆ ನಾಶವಾದ ಬಳಿಕ ಕಿನ್ನತೆಗೆ ಒಳಗಾಗಿದ್ದರು.
ಇನ್ನೊಂದೆಡೆ ಸಾಲ ತೀರಿಸುವ ದಾರಿ ಕಾಣದಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಮಹಿಳೆ ದುಡುಕಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.




