Bengaluru UrbanFeatured Story

ಬೆಂಗಳೂರು :ವರದಕ್ಷಿನಿಗಾಗಿ ಪ್ರೀತಿಸಿ ಮದುವೆಯಾದ ಗಂಡನಿಂದಲೇ ಹೆಂಡತಿಯ ಕೊಲೆ.

ಬೆಂಗಳೂರು (ಅ.05):ಪ್ರೀತಿಸಿ ಮದುವೆಯಾದ ಯುವತಿಯನ್ನೇ ಪಾಗಲ್ ಪ್ರೇಮಿಯೊಬ್ಬ ವರದಕ್ಷಿನಿಗಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕ ಉಪನಗರ 3_ನೇ ಹಂತದಲ್ಲಿ ನಡೆದಿದೆ

ಬಾಲ್ಯದಿಂದಲೇ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮನೆಯವರ ಕೈಕಾಲು ಹಿಡಿದು ಮದುವೆಯನ್ನು ಮಾಡಿಕೊಂಡು ಎರಡು ವರ್ಷಗಳ ಕಾಲ ಸಂಸಾರವನ್ನೂ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಪತಿರಾಯ ಬದಲಾಗಿದ್ದ ನೀನು ಲವ್‌ ಮಾಡಿ ಮದುವೆಯಾಗಿದ್ದು, ಈಗ ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಪೀಡಿಸಲು ಶುರು ಮಾಡಿದ್ದಾನೆ.

ಮೃತ ದುರ್ದೈವಿಯನ್ನು ರೇಖಾ ಎಂದು ಗುರುತಿಸಲಾಗಿದೆ. ಈಕೆಯ ಗಂಡ ಸಂತೋಷ್ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ಇನ್ನು ನಿವೇಶನದ ವಿಚಾರವಾಗಿ ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ. ಮನೆಯಲ್ಲಿಯೇ ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿದ್ದಾನೆ.

ಮನೆಯಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ನಾಟಕ ಆಡಲು ಮುಂದಾಗಿದ್ದನು. ಸದ್ಯ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿ ಸಂತೋಷ್‌ನನ್ನು ವಶಕ್ಕೆ ಪಡೆದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button