Featured StoryMadikeri

ಹಬ್ಬದ ದಿನದಂದು ತೋರುವ ಬಾಂಧವ್ಯವನ್ನು ಪ್ರತಿದಿನ ತೋರಿದರೆ ಬಲಿಷ್ಟ ಭಾರತ ನಿರ್ಮಾಣ ಸಾಧ್ಯ – ಶಾಸಕ ಎ.ಎಸ್.ಪೊನ್ನಣ್ಣ

ಪ್ರತಿ ಹಬ್ಬದ ಆಚರಣೆಯ ದಿನದಂದು ನಾವುಗಳು ತೋರುವ ,ಪ್ರೀತಿ
ಭಾಂದವ್ಯಗಳನ್ನು ಪ್ರತಿ ದಿನ ತೋರಿದರೆ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಅಮ್ಮತ್ತಿ ಒಂಟಿಯಂಗಡಿಯಲ್ಲಿ ಹಿಂದೂ ಮಲೆಯಾಳಿ ಸಮಾಜದ ಬಂಧುಗಳು ಆಯೋಜಿಸಿದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು‌ ವಿಭಿನ್ನತೆಯಲ್ಲಿ ಏಕತೆಯನ್ನು ತೋರುವ ಸಂಸ್ಕೃತಿ ಭಾರತೀಯರದ್ದಾಗಿದ್ದು ಎಲ್ಲಾ ಹಬ್ಬಗಳು ವಿಭಿನ್ನವಾಗಿದ್ದರೂ ಸಂದೇಶ ಮಾತ್ರ ಸಹಬಾಳ್ವೆ ಆಗಿದೆ.ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೂಡ ಎಲ್ಲಾ ಆಚರಣೆಗಳನ್ನು ,ಸಂಪ್ರದಾಯಗಳನ್ನು ಗೌರವಿಸ ಬೇಕು ಎಂದು ಕರೆ ನೀಡಿದರು.
ಜಾತಿಧರ್ಮಗಳ ಭೇದಭಾವ ಗಳು ಅತಿಯಾಗುತ್ತಿದ್ದು ಇದನ್ನು ಸರಿಪಡಸದಿದ್ದರೆ ಮುಂದಿನ ಪೀಳಿಗೆಗೆ ಇದೇ ಮಾರಕವಾಗಲಿದೆ ಎಂದು ಹೇಳಿದರು.ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿ ಸಮಾಜದಲ್ಲಿ ನಾವೆಲ್ಲಾ ಒಂದೇ ಎಂಬುವವಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಹೇಳಿದರು.

ಹಿಂದು ಮಲೆಯಾಳಿ ಸಮುದಾಯದ ಪ್ರಮುಖರು ಓಣಂ ಹಬ್ಬದಂದು ಒಂದು ದಿನದ ರಜೆಯ ಕೋರಿಕೆಯನ್ನು ಶಾಸಕರಲ್ಲಿ ಸಲ್ಲಿಸಿದರು.ಪೊನ್ನಣ್ಣ ನವರು ಮುಂದಿನ ಹಬ್ಬದ ಒಳಗಾಗಿ ಜಾರಿಗೊಳಿಸುವ ಭರವಸೆ ನೀಡಿದರು.ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸಂಘದ ವತಿಯುಂದ ಕೊಡ ಮಾಡುವ ಪುರಸ್ಕಾರ ಗಳನ್ನು ಪೊನ್ನಣ್ಣ ರವರು ವಿತರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button