UdupiFeatured Story

ಮುಸಲ್ಮಾನರ ಡಿಎನ್ ಎ ನಮ್ಮ ಡಿಎನ್ ಎ ಒಂದೆ, ನಿಮ್ಮ ನಾಲ್ಕು ತಲೆಮಾರು ಪರಿಶೀಲಿಸಿ – ಮಹಾಮಂಡಲೇಶ್ವರ ಅಖೀಲೇಶ್ ದಾಸ್ ಜಿ ಮಹಾರಾಜ್ | “ಯಾವುದೇ ಬೆಲೆತೆತ್ತು ಮಹಿಷಾ ದಸರಾ ಕಾರ್ಯಕ್ರಮ ನಾವು ತಡೆಯುತ್ತೇವೆ” – ದಿನೇಶ್ ಮೆಂಡನ್

ಉಡುಪಿ | ಉಡುಪಿಗೆ ಬರಲು ಅವಕಾಶವಾಗಿಲ್ಲ ಮೊದಲ ಬಾರಿಗೆ ಬಂದಿದ್ದೇನೆ. ನಮ್ಮ ನಮ್ಮ ಸಂಘಟನೆ ಸಂಘರ್ಷದಲ್ಲಿ ಶಕ್ತಿ ಇದೆ ಇದು ಸಂಘಟನೆ ಸಂಘರ್ಷದ ಸಂಘಟನೆ ಯುಗ ಎಂದು ಉಡುಪಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಮಹಾಮಂಡಲೇಶ್ವರ ಅಖೀಲೇಶ್ ದಾಸ್ ಜಿ ಮಹಾರಾಜ್ ಹೇಳಿದರು.

IMG 20231010 WA0060 Udupi, Featured Story

ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ತಲೆಮಾರು ಈಗ ನಮ್ಮೊಂದಿಗೆ ಇಲ್ಲ. ಶಿವರಾತ್ರಿ ಮೂಲಕ ಭಜರಂಗದಳ ವಿಶ್ವ ಹಿಂದೂ ಪರಿಷತ್ ಹಿಂದೂ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದೆ. ದೇಶದಲ್ಲಿ ಲವ್ ಜಿಹಾದ್ನ ಅಲೆ ಕೇಳಿ ಬರುತ್ತಿದೆ‌ ಹಿಂದೂ ಸಮಾಜದ ಶೌರ್ಯವನ್ನ ಎಚ್ಚರಿಸುವ ಸಮಯ ಇದಾಗಿದೆ. ವ್ಯಾಪಾರಕ್ಕಾಗಿ ಬಂದ ಬಿಳಿ ವರ್ಣಿಯರು ದೇಶದ ಒಗ್ಗಟ್ಟನ್ನು ಒಡೆದರು.ನಮ್ಮ ದೇಶದಲ್ಲಿ ಯುವಜನರನ್ನು ಎಚ್ಚರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ರಾಮಮಂದಿರದ ನಿರ್ಮಾಣ ಮತ್ತು ಹೋರಾಟದಲ್ಲಿ ಭಾಗಿಯಾದವರು ಇಂದಿಗೂ ಅವರ ಆತ್ಮ ನಮ್ಮೊಂದಿಗಿದೆ. ಯಾವ ದೇಶ ತನ್ನ ಶೌರ್ಯ ಪರಾಕ್ರಮವನ್ನು ಮರೆಯುತ್ತದೆಯೋ ಆ ದೇಶ ಛಿದ್ರ ಛಿದ್ರವಾಗುತ್ತದೆ.

ಹಿಂದೂ ಸಂಘಟನೆಗಳನ್ನ ಕಟ್ಟಿ ಹಾಕುವ ಕೆಲಸ ಕರ್ನಾಟಕದಲ್ಲಿ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿದೆ.ನಾವು ಸ್ವತಂತ್ರ ಭಾರತದ ಹಿಂದುಗಳು ನಾವು ಮಲಗಿಲ್ಲ ಎಚ್ಚೆತ್ತುಕೊಂಡಿದ್ದೇವೆ.ನಮಗೆ ಬಲಿದಾನದ ಚಿಂತೆ ಇಲ್ಲ ನಮ್ಮ ದೇಶ ಬಲಿದಾನದ ದೇಶವಾಗಿದೆ. ದೇಶದಲ್ಲಿ ಜಾತಿವಾದದ ಅಲೆ ಕೇಳಿ ಬರುತ್ತಿದೆ ಆದರೆ ಭಾರತ ದೇಶ ಜಾತಿವಾದದಿಂದ ನಿರ್ಮಾಣವಾಗಿಲ್ಲ. ನಮ್ಮ ಅಭಿಯಾನ ಕೇವಲ ಭಾರತದ ಗಡಿಯವರಿಗೆ ಸೀಮಿತವಾಗಿಲ್ಲ, ಇಡಿ ಪ್ರಪಂಚದಲ್ಲಿ ನಮ್ಮ ಶ್ರೇಯ ಹರಡಿದೆ ಎಂದರು.

ಮತಾಂತರ ಎಂದರೆ ರಾಷ್ಟ್ರಾಂತರ ಎಂದು ಸ್ವಾಮಿ ವಿವೇಕಾನಂದ ಅವರು ಹೇಳಿದ್ದಾರೆ.ವೇದಗಳಿಂದ ಹಿಡಿದು ಹನುಮಾನ ಚಾಲಿಸ್ ದವರೆಗೂ ಎಲ್ಲಿಯೂ ಕೂಡ ಅಸ್ಪೃಶ್ಯತೆಯ ಮಾತಿಲ್ಲ. ನನಗೆ ದಲಿತ ಶಬ್ದದ ಮೇಲೆ ಬಹಳ ಬೇಸರವಿದೆ, ದಲಿತ ಶಬ್ದವನ್ನು ಬಳಸಬೇಡಿ, ಹರಿಜನ ಶಬ್ಧ ಉತ್ತಮವಾಗಿತ್ತು ಎಂದರು.

ಕರ್ನಾಟಕ ರಾಜ್ಯ ಸರಕಾರ ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಬ್ಯಾನ್ ಮಾಡುವ ಮಾತನಾಡುತ್ತಿದೆ. ಸನಾತನ ವನ್ನು ಅಳಿಸಲು ಕಂಸ, ರಾವಣ, ಹುಮಾಯುನ್ ಹೈದರ್ ಪ್ರಯತ್ನ ಮಾಡಿ ಸೋತಿದ್ದಾರೆ.ಈ ದೇಶದ ಹಿಂದು ಸಮಾಜ ಸಂಘಟನೆಯಿಂದ ಇರುತ್ತದೆ, ಮುಂದೆಯೂ ಇರುತ್ತದೆ. ದಕ್ಷಿಣದಿಂದ ಪ್ರಸ್ತಾವನೆ ಇರಿಸಿ ಸನಾತನ ಧರ್ಮದ ಪ್ರಧಾನಿಗೆ ಅನುಮೋದನೆ ನೀಡಲಾಗಿತ್ತು, ಇಂದಿಗೂ ಅವರೆ ಪ್ರಧಾನಿ ಧರ್ಮ ರಕ್ಷಣೆ ಮಾಡುತ್ತಿದ್ದಾರೆ

ಮುಸಲ್ಮಾನರ ಡಿಎನ್ ಎ ನಮ್ಮ ಡಿಎನ್ ಎ ಒಂದೆ, ನಿಮ್ಮ ನಾಲ್ಕು ತಲೆಮಾರು ಪರಿಶೀಲಿಸಿ.ನೀವು ಕಲ್ಲು ಎತ್ತಿದರೆ, ಮುಂದೆ ನಮ್ಮ ಕೈಗೆ ಗುಂಡು ಬರುತ್ತದೆ ನೆನಪಿರಲಿ ಎಂದು ಉಡುಪಿಯಲ್ಲಿ ಮಹಾಮಂಡಲೇಶ್ವರ ಅಖೀಲೇಶ್ ದಾಸ್ ಜಿ ಮಹಾರಾಜ್ ಹೇಳಿದರು.

ನಂತರ ಮಾತನಾಡಿದ ವಿಹಿಂಪ ಮುಖಂಡ ದಿನೇಶ್ ಮೆಂಟನ್, ಹಿಂದೂ ಸಮಾಜದ ಯುವಕರನ್ನು ಸಂಘಟಿತ ಮಾಡುತ್ತಿದ್ದೇವೆ. ದೇಶ ಸಮಾಜ ಹಿಂದುತ್ವ ವಿರುದ್ಧ ಚಟುವಟಿಕೆ ತಡೆಯುತ್ತಿದ್ದೇವೆ. ಪ್ರತಿದಿನ ದೇಶ ಮತ್ತು ಧರ್ಮ ಉಳಿವಿಗೆ ಶ್ರಮಪಡುತ್ತಿದ್ದೇವೆ. ಸಾವಿರಾರು ವರ್ಷದಿಂದ ಹಿಂದುತ್ವ ಮೇಲೆ ದಾಳಿಯಾಗುತ್ತಿದೆ ಎಂದು ಹೇಳಿದರು.

ಹಿಂದೂಗಳಿಗೆ ಹಿಂದುತ್ವಕ್ಕಿರುವ ಇರುವ ಏಕೈಕ ದೇಶ ಭಾರತವಾಗಿದ್ದು ರಾಜಕೀಯ- ಜಾತಿ ಬಿಟ್ಟು ಹಿಂದೂಗಳು ಒಂದಾಗಬೇಕು ಎಂದು ಕರೆ ನೀಡಿದರು.

ಸನಾತನ ಧರ್ಮದ ಮೇಲೆ ಮತ್ತೆ ಮತ್ತೆ ದಾಳಿ ನಡೆಯುತ್ತಿದೆ. ಉಡುಪಿಯಲ್ಲಿ ನಾಟಕರಂಗ ಪ್ರಾರಂಭವಾಗಿದೆ. ಮಹಿಷಾ ದಸರ ಮಾಡಿ ಹಿಂದೂ ಧರ್ಮದ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ಕೃಷ್ಣನ ನಗರಿಯಲ್ಲಿ ದುಷ್ಟರ ದಸರಾ ನಡೆದರೆ ವಿರೋಧಿಸುತ್ತೇವೆ ಎಂದ ಅವರು,ಮಹಿಷಾ ದಸರಾವನ್ನು ವಿಹಿಂಪ ಭಜರಂಗದಳ ಖಂಡಿಸುತ್ತದೆ. ಪೊಲೀಸ್ ಇಲಾಖೆ ಈ ಕಾರ್ಯಕ್ರಮ ತಡೆಯಬೇಕು ಎಂದರು.

ಪೊಲೀಸರು ತಡೆಯದಿದ್ದರೆ ಯಾವುದೇ ಬೆಲೆತೆತ್ತು ಮಹಿಷಾ ದಸರಾ ಕಾರ್ಯಕ್ರಮ ನಾವು ತಡೆಯುತ್ತೇವೆ. ಭಜರಂಗದಳ ವಿಹಿಂಪ ಸಂಘರ್ಷದಲ್ಲೇ ಹುಟ್ಟಿ ಬೆಳೆದದ್ದು, ಮತಾಂತರ ಲವ್ ಜಿಹಾದ್ ಸಂದರ್ಭ ದೇಶ ಸಮಾಜಕ್ಕಾಗಿ ವಿರೋಧ ಮಾಡುತ್ತಿದ್ದೇವೆ‌.ಹಿಂದೂ ವಿರೋಧಿ ಚಟುವಟಿಕೆಗೆ ಶೌರ್ಯತ್ವದ ಸಂಕೇತ ಪ್ರದರ್ಶಿಸಬೇಕಾಗುತ್ತದೆ ಎಂದು ಹೇಳಿದರು.

ಶಿವಮೊಗ್ಗ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಹಿಂದೂ ಸಮಾಜವನ್ನು ಬೆದರಿಸುವ ಕೆಲಸ ಮಾಡುತ್ತಿದ್ದೀರಿ.ಅಖಂಡ ಭಾರತವನ್ನು ಹಸಿರೀಕರಣ ಮಾಡಿದ್ದೀರಿ. ನಿಮ್ಮ ಕಲ್ಪನೆ ಭಾವಚಿತ್ರಕ್ಕೆ ಮಾತ್ರ ಸೀಮಿತವಾಗಿ ಇರುತ್ತದೆ ಎಂದರು.

ಭಾರತ ಅಖಂಡವಾಗುತ್ತದೆ – ಅದು ಕೇಸರಿಮಯ ಆಗುತ್ತದೆ.ಫ್ಲೆಕ್ಸ್ ಹಾಕಲು, 10-20 ಲಕ್ಷದ ಬಾಂಡ್ , ಭಗವಾಧ್ವಜಕ್ಕೆ ಕಾನೂನು ವಿರೋಧ ಬಂತು.ರಾಮ ಮಂದಿರ ನಿರ್ಮಾಣ ಸಂದರ್ಭ
ಮನೆ ಮನೆಯಲ್ಲಿ ಕೇಸರಿ ಧ್ವಜ ಹಾರಾಡುತ್ತದೆ. ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಾಂಡ್ ಪತ್ರ ಹಿಡಿದು ಹೋರಾಟ ಮಾಡುತ್ತೇವೆ ಎಂದರು.

ಹತ್ತು ಕೋಟಿಯ ಬಾಂಡ್ ಗೆ ಸಹಿ ಹಾಕುತ್ತೇವೆ.
ಅಧಿಕಾರಿಗಳ ಕಾರ್ಯವ್ಯಾಪ್ತಿಯನ್ನು ಹಿಂದು ಸಂಘಟನೆ ಗೌರವಿಸುತ್ತದೆ.ಉಡುಪಿಯಲ್ಲಿ ಒಂದೇ ಒಂದು ಜಲ್ಲಿಕಲ್ಲು ಅಲ್ಲಾಡಿಲ್ಲ.ಶಿವಮೊಗ್ಗದ ಮಾನಸಿಕತೆಯನ್ನು ಹಿಂದು ಯುವಕರು ಅನುಕರಿಸಿದರೆ ಉಡುಪಿಯಲ್ಲಿ ಯಾರಿಗೂ ವಾಸ ಮಾಡಲು ಅವಕಾಶ ಇರುತ್ತಿರಲಿಲ್ಲ ಎಂದರು.

ಶಿವಮೊಗ್ಗದ ಹಿಂದೂ ಸಮಾಜ ಜೊತೆ ರಾಜ್ಯದ ಹಿಂದೂಗಳು ನಿಲ್ಲುತ್ತಾರೆ‌ ಎಂದು ಉಡುಪಿಯಲ್ಲಿ ವಿಹಿಂಪ ಮುಖಂಡ ದಿನೇಶ್ ಮೆಂಡನ್ ಭಾಷಣ ಕರೆ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button