
ನಿಮಗೂ ಜೋರು ಶಬ್ಧದೊಂದಿಗೆ ಈ ಮೆಸೇಜ್ ಬಂತಾ ಗಾಬರಿಯಾಗಬೇಡಿ ? ಏನಿದು ಎಮರ್ಜೆನ್ಸಿ ಮೇಸಜ್
ಬೆಂಗಳೂರು, ಅ.12: ನಿಮ್ಮ ಸ್ಮಾರ್ಟ್ಫೋನ್ ಏಕಾಏಕಿ ದೊಡ್ಡ ಬೀಪ್ ಸೌಂಡ್ ಮಾಡುತ್ತಿದೆಯೇ ಮೇಸಜ್ ಬಂದಿದ್ದೀಯಾ, ಜೋರಾಗಿ ವೈಬ್ರೆಟ್ ಆಯ್ತಾ ಏನಿದು ಅಂತ ಗಾಬರಿಯಾಗಬೇಡಿ.ಯಾಕಂದ್ರೇ ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆ ಎಮರ್ಜೆನ್ಸಿ ಅಲರ್ಟ್ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದು, ಗುರುವಾರ ಈ ಅಲರ್ಟ್ ಸೇವೆಯ ಪ್ರಯೋಗ ನಡೆಯುತ್ತಿದೆ.
ಭೂಕಂಪ, ಪ್ರವಾಹ ಸೇರಿ ಅನೇಕ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಜನರಿಗೆ ತ್ವರಿತಗತಿಯಲ್ಲಿ ಎಚ್ಚರಿಕೆ ನೀಡುವ ಉದ್ದೇಶದಿಂಂದ ಎಮರ್ಜೆನ್ಸಿ ಅಲರ್ಟ್ ಸೇವೆಯನ್ನು ದೂರ ಸಂಪರ್ಕ ಇಲಾಖೆ ಪರಿಚಯಿಸುತ್ತಿದೆ. ಎಮರ್ಜೆನ್ಸಿ ಅಲರ್ಟ್ ಸೇವೆಯ ಪರೀಕ್ಷಾರ್ಥ ಪ್ರಯೋಗವೂ ಈಗಾಗಲೇ ಹಲವು ದೇಶಗಳಲ್ಲಿ ನಡೆದಿದ್ದು, ಕರ್ನಾಟಕದಲ್ಲಿ ಅಕ್ಟೋಬರ್ 12 (ಗುರುವಾರ) ಈ ಪ್ರಯೋಗ ನಡೆಯಲಿದೆ. ಭಾರೀ ಶಬ್ಧ ಮತ್ತು ವೈಬ್ರೆಟ್ನೊಂದಿಗೆ ಜನರು ಟೆಸ್ಟ್ ಎಮರ್ಜೆನ್ಸಿ ಅಲರ್ಟ್ಗಳನ್ನು ಸ್ಮಾರ್ಟ್ಫೋನ್ನಲ್ಲಿ ಬಂದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಜಾರಿಗೆ ತರಲಾಗುತ್ತಿರುವ ಭಾರತದಾದ್ಯಂತದ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಅನ್ನು ಪರೀಕ್ಷಿಸಲು ಈ ಸಂದೇಶ ಕಳುಹಿಸಲಾಗಿದೆ.ಬೇರೆ ಬೇರೆ ದೇಶಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಈ ಮೆಸೇಜ್ ಬಂದಿದೆ, ಇನ್ನೂ ಕರ್ನಾಟಕದಲ್ಲಿ ಇಂಗ್ಲೀಷ್ ಹಾಗೂ ಕನ್ನಡದಲ್ಲೂ ಈ ಸಂದೇಶ ಬಂದಿದೆ.




