
Featured StoryKodagu
ಕೊಡಗು: ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳಿಬ್ಬರ ಮೇಲೆ ಗುಂಡಿನ ದಾಳಿ
ತಡರಾತ್ರಿ ಬೇಟೆಗೆ ಹೋಗಿದ್ದ ನಾಲ್ಕು ಜನರ ಗುಂಪೊಂದು ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳಿಬ್ಬರ ಮೇಲೆ ಗುಂಡು ಹಾರಿಸಿದ ಘಟನೆ ಶನಿವಾರ ಸಂತೆ ಬಳಿಯ ಕಣಗಾಲು ಮತ್ತು ಮಾಲಂಬಿ ರಸ್ತೆ ಮಧ್ಯೆ ನಡೆದಿದೆ.
ಗಸ್ತಿನಲ್ಲಿದ್ದ ಪ್ರಕಾಶ್ ಮತ್ತು ವಿಕಾಸ್ ಎಂಬುವರಿಗೆ ಬಲಗೈ ಮತ್ತು ಎಡಗೈಗೆ ಗುಂಡು ತಾಗಿ ಗಾಯವಾಗಿದೆ.
ಬೇಟೆಗೆ ಬಂದಿದ್ದವರನ್ನು ಇಲಾಖೆ ಜೀಪಿನಲ್ಲಿ ಹಿಂಬಾಲಿಸಿ ಹೊರಟಿದ್ದ ಸಂದರ್ಭ ಮುಳ್ಳೂರಿನ ಬಳಿ ಬೇಟೆಗೆ ಬಂದಿದ್ದ ಮಹೇಂದ್ರ ಜೀಪ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ನಿಂತಿರುವುದು ಕಂಡುಬಂದಿದೆ.
ಬೇಟೆಗೆ ಬಂದಿದ್ದ ನಾಲ್ಕು ಜನರಲ್ಲಿ ಇಬ್ಬರೂ ಸಿಕ್ಕಿಬಿದ್ದಿದ್ದು. ಧನುಷ್ ಕೆಂಚಂಬಾಣೆ, ರಾಜಶೇಖರ್ ಆನೆಕೆರೆ ಎಂದು ತಿಳಿದುಬಂದಿದೆ.
ಇನ್ನಿಬ್ಬರು ತಲೆಮರೆಸಿಕೊಂಡಿದ್ದು ಅದರಲ್ಲಿ ಒಬ್ಬಾತ ಶರತ್ ಎಂಬುದಾಗಿ ತಿಳಿದುಬಂದಿದೆ.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




