
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೋಡ್ ಶೆಡ್ಡಿಂಗ್ ತೀವ್ರಗೊಂಡಿದೆ – ಮಾಜಿ ಸಚಿವ ಮುರುಗೇಶ್ ನಿರಾಣಿ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೋಡ್ ಶೆಡ್ಡಿಂಗ್ ತೀವ್ರಗೊಂಡಿದೆ. ಎಲ್ಲಾ ಇಲಾಖೆಯಲ್ಲಿ ಅಭಿವೃದ್ಧಿ ಶೂನ್ಯ ಪರಿಸ್ಥಿತಿ ತಲೆದೋರಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಸರ್ಕಾರ ವಿದ್ಯುತ್ ದರ ಗಣನೀಯವಾಗಿ ಹೆಚ್ಚಳ ಮಾಡಿದೆ. ಎಲ್ಲಾ ಕೈಗಾರಿಕೆದಾರರ ಸಂಘಗಳು, ಸಣ್ಣ- ಗುಡಿ ಕೈಗಾರಿಕೆಗಳು ವಿದ್ಯುತ್ ದರ ಇಳಿಸಲು ಸರ್ಕಾರಕ್ಕೆ ಮನವಿ ಮಾಡಿವೆ. ಹಿಂದೆ ಕರ್ನಾಟಕದಲ್ಲಿ ಬೆಂಗಳೂರನ್ನು ಇಡೀ ವಿಶ್ವವೇ ತಿರುಗಿ ನೋಡುವ ಸ್ಥಿತಿ ಇತ್ತು. ಈಗ ಎಲ್ಲಾ ಕೈಗಾರಿಕೆಗಳು ಬೇರೆ ರಾಜ್ಯದತ್ತ ಮುಖ ಮಾಡಿವೆ. ಹೊಸದಾಗಿ ಬರಬೇಕಿದ್ದ ಕೈಗಾರಿಕೆಗಳೂ ಈಗ ಬೇರೆ ಕಡೆ ಹೋಗುವ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಕ್ಷೇತ್ರದ ವಿಚಾರವಾಗಿ ಹೇಳಬೇಕಿದ್ದರೆ, ನಮ್ಮ ಶಾಸಕ ಜಿ.ಟಿ ಪಾಟೀಲ್ ಎಲ್ಲಾ ಕಂಟ್ರಾಕ್ಟ್, ಪ್ರಾಜೆಕ್ಟ್ ಎಲವನ್ನೂ ಮೌಕಿಕವಾಗಿ ಸ್ಥಗಿತಗೊಳಿಸಿದ್ದಾರೆ. ಅತ್ಯಂತ ಪ್ರಾಮಾಣಿಕ ಶಾಸಕ ಅಂತಾರೆ. ಅವರು ಎಲ್ಲರನ್ನೂ ಕರೆದು ಇಷ್ಟು ಪಸರ್ಂಟೇಜ್ ಬೇಕು ಅಂತ ಕೇಳಿದ್ದಾರೆ. ಮುಂದಿನ ಬಾರಿ ಎಂಎಲ್‍ಎ ಗೆ ನಿಲ್ಲೋದಿಲ್ಲ. ನನಗೆ ದುಡ್ಡು ಕೊಟ್ರೇನೇ ಕೆಲಸ ಮಾಡಿಕೊಡೋದು ಎಂದು ಮುಕ್ತವಾಗಿ ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್ಸ್ ಬಳಿ ಹೇಳಿದ್ದಾರೆ. ಇದರ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮತದಾರರು ಕೂಡ ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ




