Bengaluru UrbanFeatured Story

ಜನರನ್ನು ಕತ್ತಲೆಗೆ ದೂಡುವುದೇ ಕಾಂಗ್ರೆಸ್ಸಿನ ಗ್ಯಾರಂಟಿ..? – ರಾಜ್ಯ ಬಿಜೆಪಿ ಟೀಕೆ

ಬೆಂಗಳೂರು, ಅ. 12:ಗ್ಯಾರಂಟಿ ಯೋಜನೆ ಎಂದು ಸುಮ್ಮನೆ ಜನರನ್ನು ಕತ್ತಲೆಗೆ ದೂಡುವುದೇ ಕಾಂಗ್ರೆಸ್ಸಿನ ಗುರಿಯಾಗಿದೆ. ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಬಿಜೆಪಿ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ನೀಡಿದೆ. ಆದರೆ, ಕಾಂಗ್ರೆಸ್ 2 ಗಂಟೆಯೂ ರೈತರಿಗೆ ವಿದ್ಯುತ್ ‌ನೀಡುತ್ತಿಲ್ಲ. ಬಿಜೆಪಿ ಸರ್ಕಾರ ಪ್ರತಿ ಮನೆಗೂ 24 ಗಂಟೆ ವಿದ್ಯುತ್ ನೀಡಿದೆ.‌ ಆದರೆ ಕಾಂಗ್ರೆಸ್ ಗ್ರಾಮೀಣ ಪ್ರದೇಶದಲ್ಲಿ 8 ತಾಸೂ ವಿದ್ಯುತ್ ನೀಡುತ್ತಿಲ್ಲ ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಸರ್ಕಾರ ಕೈಗಾರಿಕೆಗಳಿಗೆ ಭರಪೂರ ವಿದ್ಯುತ್ ಪೂರೈಕೆ ನೀಡಿದೆ. ಆದರೆ, ಕಾಂಗ್ರೆಸ್ ವಿದ್ಯುತ್ ದರ ದುಪ್ಪಟ್ಟು ಹೆಚ್ಚಿಸಿ ವಿದ್ಯುತ್ ನೀಡದೆ ಕೈಗಾರಿಕೆಗಳನ್ನು ಮುಚ್ಚಿಸಿದೆ. ಇನ್ನೂ ಬಿಜೆಪಿ ಸರ್ಕಾರ ಶಾಲಾ ಮಕ್ಕಳು ಡಿಜಿಟಲ್ ಮೂಲಕ ಕಲಿಯಲು ಅವಕಾಶ ‌ಮಾಡಿತು. ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ಪವರ್ ಸರ್‌ಪ್ಲಸ್‌ ಸ್ಟೇಟ್ ಆಗಿ ಮಾಡಿತು. ಆದರೆ, ಕಾಂಗ್ರೆಸ್ ಕರ್ನಾಟಕದ ಘನತೆ ಕಳೆದು ಹೊರ ರಾಜ್ಯಗಳ ಮುಂದೆ ವಿದ್ಯುತ್ ಭಿಕ್ಷೆ ಬೇಡುತ್ತಿದೆ ಎಂದು ಟ್ವೀಟ್‌ ಮೂಲಕ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button