
ಬೆಂಗಳೂರು ಸಬ್ ಅರ್ಬನ್ ರೈಲು; KIAಗೆ ಹೊಸ ನಿಲ್ದಾಣ ಸೇರ್ಪಡೆ
ಬೆಂಗಳೂರು ಅ.16; ಕ್ಯಾಬ್, ನ್ಮ ಮೆಟ್ರೋ ಜೊತೆಗೆ ಉಪ ನಗರ ರೈಲು ಯೋಜನೆಯ 2 ನಿಲ್ದಾಣಗಳು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿವೆ.ಬೆಂಗಳೂರು ಉಪ ನಗರ ರೈಲು (ಸಬ್ ಅರ್ಬನ್) ಯೋಜನೆಯಡಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಹೆಚ್ಚುವರಿಯಾಗಿ ನಿಲ್ದಾಣವೊಂದನ್ನು ನಿರ್ಮಾಣ ಮಾಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಭವಿಷ್ಯದಲ್ಲಿ ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಸಬ್ ಅರ್ಬನ್ ರೈಲು ಯೋಜನೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ‘ಸಂಪಿಗೆ’ ಕಾರಿಡಾರ್ 148.17 ಕಿ. ಮೀ. ವ್ಯಾಪ್ತಿ ಹೊಂದಿದೆ.ಎಲ್ಲಿ ನಿಲ್ದಾಣ ನಿರ್ಮಾಣ? ಸಬ್ ಅರ್ಬನ್ ರೈಲು ಯೋಜನೆಯಡಿ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದು ನಿಲ್ದಾಣವನ್ನು ಮೊದಲು ಯೋಜನೆ ಮಾಡಲಾಗಿತ್ತು.
ಸಬ್ ಅರ್ಬನ್ ರೈಲು ಯೋಜನೆಯಡಿ ಟರ್ಮಿನಲ್ ಸಮೀಪವೇ ಮೊದಲ ನಿಲ್ದಾಣ ನಿರ್ಮಾಣವಾಗಲಿದೆ. ಹೊಸ ಟೋಲ್ ಫ್ರೀ ರಸ್ತೆಯ ಸಮೀಪದಲ್ಲಿ ಎರಡನೇ ನಿಲ್ದಾಣ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಮೂಲಕ ವಿಮಾನ ನಿಲ್ದಾಣ ಪ್ರಯಾಣಿಕರನ್ನು ಸೆಳೆಯಲು ಮುಂದಾಗಿದೆ. ಈ ‘ಸಂಪಿಗೆ’ ಕಾರಿಡಾರ್ ನಿರ್ಮಾಣಕ್ಕೆ ಡಿಸೆಂಬರ್ನಲ್ಲಿ ಟೆಂಡರ್ ಕರೆಯುವ ನಿರೀಕ್ಷೆ ಇದೆ.




