
ವಿದ್ಯಾರ್ಥಿಗೆ ಬೆತ್ತದಿಂದ ಹೊಡೆದ, ಕಪಾಳಕ್ಕೆ ಹೊಡೆದ ಕೊನೆಗೆ ಮೇಲೆತ್ತಿ ಕೆಳಗೆಸೆದ; ಗುರುಕುಲದ ಆಚಾರ್ಯನ ಅಮಾನವೀಯ ಕೃತ್ಯ
ಸೀತಾಪುರ ಜಿಲ್ಲೆಯಿಂದ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋ ಗುರುಕುಲದಿಂದ ಬಂದಿದೆ. ಇಲ್ಲಿ ಆಚಾರ್ಯನೊಬ್ಬ ಮಗುವನ್ನು ನಿಷ್ಕರುಣೆಯಿಂದ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ. ಮೊದಲು ಮಗುವನ್ನು ಕೋಲಿನಿಂದ ಹೊಡೆದಿದ್ದಾನೆ. ಬಳಿಕಅವನನ್ನು ಎತ್ತಿ ಮಕ್ಕಳ ಮುಂದೆ ಎಸೆದಿದ್ದಾನೆ. ಇದರಿಂದ ಅಲ್ಲೇ ನಿಂತಿದ್ದ ಇತರ ವಿದ್ಯಾರ್ಥಿಗಳೂ ಭಯಗೊಂಡಿದ್ದಾರೆ.
ಸೀತಾಪುರದ ಸಿಧೌಲಿ ಪ್ರದೇಶದ ಗುರುಕುಲದಲ್ಲಿ ಶಿಕ್ಷಕರೊಬ್ಬರು ರಾಕ್ಷಸನಂತೆ ವರ್ತಿಸಿದ್ದಾನೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ಮಗುವಿಗೆ ದೊಣ್ಣೆಯಿಂದ ತೀವ್ರವಾಗಿ ಥಳಿಸಿದ್ದಾನೆ. ಆ ನಂತರವೂ ಕೋಪ ಕಡಿಮೆಯಾಗದಿದ್ದಾಗ ಮಗುವನ್ನು ಎತ್ತಿಕೊಂಡು ಎಸೆದಿದ್ದಾನೆ. ಇದೀಗ ಈ ನಡೆ ಗುರುಕುಲ ಶಿಕ್ಷಣ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎತ್ತಿದೆ.
ಈ ಸಂಪೂರ್ಣ ಘಟನೆಯನ್ನು ಯಾರೋ ವಿಡಿಯೋ ಮಾಡಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಬಳಿಕ ಆಚಾರ್ಯ ಅವರೇ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಹದಿಹರೆಯದ ಬಾಲಕಿಯರ ವಸತಿಯುತ ಗುರುಕುಲ ಗ್ರಾಮದ ಝಜನ್ ಸಿಧೌಲಿಯ ಆಚಾರ್ಯ ಸತೀಶ್ ಶಾಸ್ತ್ರಿ ಗುರುಕುಲದಲ್ಲಿ ಮಗುವನ್ನು ತೀವ್ರವಾಗಿ ಥಳಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮೊದಲು ಮಗುವನ್ನು ಕೋಲಿನಿಂದ ಹೊಡೆದಿದ್ದಾನೆ. ಬಳಿಕ ಅದನ್ನು ಎತ್ತಿ ಮಕ್ಕಳ ಮುಂದೆ ಎಸೆದ. ಇದರಿಂದ ಅಲ್ಲೇ ನಿಂತಿದ್ದ ಇತರ ವಿದ್ಯಾರ್ಥಿಗಳೂ ಭಯಗೊಂಡರು. ವೀಡಿಯೊ ವೈರಲ್ ಆದ ನಂತರ ಸ್ಪಷ್ಟನೆ ನೀಡಿ, ಮಗು ಹಣ ಕದ್ದ ಕಾರಣ ಅವರ ಕುಟುಂಬದವರನ್ನು ಕರೆದು ಅವರ ಮುಂದೆಯೇ ಥಳಿಸಿದ್ದಾರೆ ಎಂದು ಹೇಳಿದ್ದಾನೆ. ಒಟ್ಟಿನಲ್ಲಿ ಈತನ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.
ಸುದ್ದಿ ಮೂಲ:




