
Bidar
ಬೀದರ್ | 16 ಚಿನ್ನದ ಪದಕ ಪಡೆದ ರೈತನ ಮಗ.
ಕರ್ನಾಟಕ ಪಶುವೈದ್ಯಕೀಯ ಹಾಗೂ ಪಶು, ಮೀನುಗಾರಿಕೆ ವಿಜ್ಙಾನ ವಿಶ್ವವಿದ್ಯಾಲಯದ 13 ನೇ ಘಟಿಕೊತ್ಸವದಲ್ಲಿ ರೈತನ ಮಗನೊಬ್ಬನು 16 ಗೋಲ್ಡ್ ಮೇಡಲ್ ಪಡೆದು ಸಾಧನೆ ಮೆರೆದಿದ್ದಾನೆ.
ನಗರದ ಹೊರವಲಯದ ನಂದಿ ನಗರದಲ್ಲಿರುವ ಪಶು ವಿವಿಯಲ್ಲಿ ನಡೆದ 13ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಟ್ಟು 837 ವಿದ್ಯಾರ್ಥಿಗಳಿಗೆ ಪದಕ ಪ್ರಧಾನ ಮಾಡಿದರು.
ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ, ಕುಲಪತಿ ವೀರಣ್ಣ ಸೇರಿದಂತೆ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಭಾಗಿಯಾಗಿದ್ರು. ಗದಗ ಪಶು ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ ಮಂಡ್ಯ ಮೂಲದ ಎ.ಎನ್ ರಘವೇಶ್ 16 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಶ್ರದ್ದೆ ವಹಿಸಿ ಒದಿದ್ರೆ ಎಲ್ಲವೂ ಸಾದ್ಯವಾಗುತ್ತೆ. ಮೆಡಲ್ ಬರುತ್ತೆ ಅಂತಾ ಅನ್ಕೊಂಡಿದ್ದೆ, ಆದರೆ ಇಷ್ಟೊಂದು ಪದಕ ಬರುತ್ತೆ ಅಂತಾ ಅನ್ಕೊಂಡಿರಲಿಲ್ಲಾ. ಪದಕಗಳನ್ನು ನನ್ನ ತಂದೆ-ತಾಯಿ, ಗುರುಗಳಿಗೆ ಸಮರ್ಪಣೆ ಮಾಡ್ತೇನೆ ಎಂದು 16 ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿ ರಘವೇಶ್ ಹೇಳಿದ್ದಾರೆ.




