
Featured StoryState News
ಆನೇಕಲ್ ಪಟಾಕಿ ದುರಂತ ಸಂತ್ರಸ್ತರಿಗೆ ಸರಕಾರ ತಕ್ಷಣ ಪರಿಹಾರ ಕಲ್ಪಿಸಲು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಆಗ್ರಹ
ಬೆಂಗಳೂರಿನ ಆನೇಕಲ್ ಬಳಿ ಪಟಾಕಿ ಮಳಿಗೆಯಲ್ಲಿ ಸಂಭವಿಸಿದ ಬೆಂಕಿ ಅವಘಡ ಖೇದಕರ. ಬಲಿಯಾದ ಬಡಕೂಲಿ ಕಾರ್ಮಿಕರಿಗೆ ಸೂಕ್ತ ಪರಿಹಾರ ಧನವನ್ನು ಸರಕಾರ ಕಲ್ಪಿಸಬೇಕು. ಜೊತೆಗೇ ಗಾಯಾಳುಗಳಿಗೂ ಪರಿಹಾರಧನದ ಜೊತೆ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ಸರಕಾರವನ್ನು ಆಗ್ರಹಿಸಿದ್ದಾರೆ.
ಅವರು ಮಾತನಾಡುತ್ತಾ, ಪಟಾಕಿಯಂತಹ ಸ್ಪೋಟಕ ವಸ್ತುಗಳನ್ನು ಸಾಗಿಸುವಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮದಲ್ಲಿ ನ ಭದ್ರತಾ ವೈಫಲ್ಯ ತೆಯನ್ನು ಇದು ಎತ್ತಿ ತೋರಿಸುತ್ತದೆ. ಇಂತಹ ದುರಂತಗಳಲ್ಲಿ ಬಡಕೂಲಿ ಕಾರ್ಮಿಕರು ಬಲಿಯಾಗಿ ಕುಟುಂಬಗಳು ಅನಾಥವಾಗುತ್ತವೆ. ಪಟಾಕಿ ಅಂಗಡಿ ಮಾಲೀಕರ ನಿರ್ಲಕ್ಷತೆ, ಕಾನೂನಿನ ಲೋಪದ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು.
ಬಲಿಯಾದವರಿಗೆ ತಕ್ಷಣ ಗರಿಷ್ಠ ಮೊತ್ತದ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.




