Featured StoryState NewsVijayapura

ಗ್ರಂಥಾಲಯ ಸಹಾಯಕರ ಹುದ್ದೆ: ಅ.31 ರಂದು ನೇರ ಸಂದರ್ಶನ

ವಿಜಯಪುರ: ಕೃಷಿ ಮಹಾವಿದ್ಯಾಲಯ ಖಾಲಿ ಇರುವ ಎರಡು ಗ್ರಂಥಾಲಯ ಸಹಾಯಕರ ಹುದ್ದೆಗಳ ತಾತ್ಕಾಲಿಕ ನೇಮಕಾತಿಗಾಗಿ ಅ.31 ರಂದು ಮದ್ಯಾಹ್ನ 2:30 ಗಂಟೆಗೆ ಕೃಷಿ ಮಹಾವಿದ್ಯಾಲಯ ಡೀನ್ ಕೊಠಡಿಯಲ್ಲಿ ಸದರ್ಶನ ಏರ್ಪಡಿಸಲಾಗಿದೆ.

ಸಂದರ್ಶನಕ್ಕೆ ಹಾಜರಾಗುವ ಆಸಕ್ತ ಅಭ್ಯರ್ಥಿಗಳು ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್ ಅಥವಾ ಬಿ.ಲಿಬ್.ಐ.ಎಸ್‌ಸಿ, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಅಥವಾ ಎಮ್.ಲಿಬ್.ಐ.ಎಸ್‌ಸಿ, ಹಾಗೂ ವರ್ಗೀಕರಣ ಮತ್ತು ಕ್ಯಾಟಲಾಗ್ ಪುಸ್ತಕಗಳಲ್ಲಿ ಅನುಭವ ಮತ್ತು ಗ್ರಂಥಾಲಯ, ಕಾಲೇಜು, ಸಂಶೋಧನಾ ಸಂಸ್ಥೆಯಲ್ಲಿ ಅರ್ಹತೆ ಪಡೆದಿರುವ ವಿದ್ಯಾರ್ಹತೆಗೆ ಸಂಬಧಿಸಿದ ಎಲ್ಲ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿ ಮತ್ತು ಭಾವಚಿತ್ರ ಅರ್ಜಿ ನಮೂನೆಗೆ ಲಗತ್ತಿಸಿ ಸಂದರ್ಶನದ ಸಮಯದಲ್ಲಿ ಹಾಜರಿರಬೇಕು ಅರ್ಜಿ ಮುಂಚಿತವಾಗಿ ಕಳುಹಿಸಲು ಅವಕಾಶವಿರುವುದಿಲ್ಲ ಎಂದು ಡೀನ್ ಕೃಷಿ ಮಹಾವಿದ್ಯಾಲಯ ವಿಜಯಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button