
Featured StoryDakshina Kannada
ಉಳ್ಳಾಲ: ಮತ್ಯೋದ್ಯಮಿ, ಮರೈನ್ ಎಂಟರ್ ಪೈಸಸ್ನ ಮಾಲಕ ಅನ್ವರ್ ಹುಸೈನ್ ನಿಧನ
ಮಂಗಳೂರು, ಅ.18: ಮತ್ಯೋದ್ಯಮಿ, ಮರೈನ್ ಎಂಟರ್ ಪೈಸಸ್ನ ಮಾಲಕ, ಉಳ್ಳಾಲ ನಿವಾಸಿ ಅನ್ವರ್ ಹುಸೈನ್ (79) ಬುಧವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಬ್ಲೂಲೈನ್ನ ಮಾಲಕ ಶೌಕತ್ ಶೌರಿ ಸಹಿತ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಉಳ್ಳಾಲವನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸುತ್ತಿದ್ದ ‘ಉಳ್ಳಾಲ ಸೆಂಟ್ರಲ್ ಕಮಿಟಿ’ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು.
ಹಲವು ವರ್ಷಗಳಿಂದ ಮತ್ರೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅನ್ವರ್ ಹುಸೈನ್ ಕೊಡುಗೈ ದಾನಿಯೂ ಆಗಿದ್ದರು. ಅನೇಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿ ಅವುಗಳ ಪುನಶ್ವೇತನಕ್ಕೆ ಕಾರಣರಾಗಿದ್ದರು. ಜನಪರ ಸೇವೆಗೆ ಸದಾ ಮಿಡಿಯುತ್ತಿದ್ದ ಅವರು ಸಮಾಜದ ತಳಮಟ್ಟದ ಜನರಿಗೆ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದರು ಎನ್ನಲಾಗಿದೆ.




