Crime

ಇಸ್ರೇಲ್-ಹಮಾಸ್ ಯುದ್ಧ | ಗಾಜಾದಲ್ಲಿ ‘ಭಾರೀ ಬಾಂಬ್ ಸ್ಫೋಟಗಳು | ಅಪಾಯದಲ್ಲಿರುವ ಆಸ್ಪತ್ರೆಗಳು, 24 ಗಂಟೆಯಲ್ಲಿ 400 ಮಂದಿಯ ಹತ್ಯೆ

ಇಸ್ರೇಲ್ – ಗಾಝಾ ಯುದ್ಧ ವರದಿ:

ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಗಾಜಾದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಿಂದ ಸುಮಾರು 400 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ.

ಜನನಿಬಿಡ ಜಬಾಲಿಯಾ ನಿರಾಶ್ರಿತರ ಶಿಬಿರ ಮತ್ತು ಗಾಜಾದ ಅಲ್-ಶಿಫಾ ಮತ್ತು ಅಲ್-ಕುದ್ಸ್ ಆಸ್ಪತ್ರೆಗಳಿಗೆ ಸಮೀಪವಿರುವ ಸ್ಥಳಗಳು ಸೇರಿದಂತೆ ಗಾಜಾದಲ್ಲಿನ ವಸತಿ ಪ್ರದೇಶಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ.

ರಾಮಲ್ಲಾ ಬಳಿಯ ಜಲಜೋನ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡಿದ ನಂತರ ಇಸ್ರೇಲಿ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಇಬ್ಬರು ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರ್ಯಕರ್ತರನ್ನು ಬಂಧಿಸಲು ಸೈನಿಕರು ನಿರಾಶ್ರಿತರ ಶಿಬಿರಕ್ಕೆ ನುಗ್ಗಿದರು. ಇದು ಘರ್ಷಣೆಗೆ ಕಾರಣವಾಯಿತು ಎಂದು ಅಧಿಕೃತ ವಫಾ ಸುದ್ದಿ ಸಂಸ್ಥೆ ತಿಳಿಸಿದೆ, ದಾಳಿಯಲ್ಲಿ 20 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button