Featured StoryMadikeri

ಅರಣ್ಯ ಅಧಿಕಾರಿಗಳು ಮೊದಲು ಕಾನೂನನ್ನು ತಿಳಿದುಕೊಳ್ಳಲಿ – ಶಾಸಕ ಏ.ಎಸ್ ಪೊನ್ನಣ್ಣ

ಪೂರ್ವಜರಿಂದ ಬಂದ ಭೇಟೆ ಆಡಿದ ಪ್ರಾಣಿಗಳ ಉತ್ಪನ್ನಗಳನ್ನು ಬಳಸುವುದು ಅಪರಾಧವಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರರಾದ ಎ ಎಸ್ ಪೊನ್ನಣ್ಣನವರು ಸ್ಪಷ್ಟ ಪಡಿಸಿದ್ದಾರೆ.
ನಟ ಜಗ್ಗೇಶ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು ತಡೆಯಾಜ್ಞೆ ಕೂಡ ನೀಡಿದೆ.ಪರಂಪರಾಗರವಾಗಿ ಬಳಸುತ್ತಿದ್ದ ವಸ್ತುಗಳ ಮೇಲೆ ಪ್ರಕರಣ ದಾಖಲು ಸರಿಯಲ್ಲ ಎಂದು ಪೊನ್ನಣ್ಣ ಹೇಳಿದ್ದಾರೆ.

ಅರಣ್ಯ ಅಧಿಕಾರಿಗಳು ಮೊದಲು ಕಾನೂನು ತಿಳಿದುಕೊಳ್ಳಲಿ
ಸರಕಾರ ಅರಣ್ಯಾಧಿಕಾರಿಗಳಿಗೆ ಸರಿಯಾದ ನಿರ್ದೇಶನ ನೀಡಲಿ ಎಂದರು.

ಈ ವಿಚಾರ ಸಂಬಂಧ ಕಾನೂನಿನಲ್ಲಿ ರಕ್ಷಣೆ ಇದೆ.ಅರಣ್ಯ ಅಧಿಕಾರಿಗಳಿಗೆ ಎಫ್ ಐ ಆರ್ ಮಾಡುವ ಅಧಿಕಾರ ಇಲ್ಲ ಕಾನೂನು ವ್ಯಾಪ್ತಿ ಮೀರಿ ಎಫ್. ಐ.ಆರ್ ಮಾಡಲಾಗುತ್ತಿದೆ. ಕೊಡಗಿನಲ್ಲಿ ಪೂರ್ವಜರ ಕಾಲದಿಂದಲೂ ಪಾರಂಪರಿಕವಾಗಿ ವನ್ಯ ಜೀವಿಗಳ ವಸ್ತುಗಳನ್ನು ಬಳಸಲಾಗುತ್ತಿದೆ. ಇದು ಹೀಗೆ ಅಪರಾಧವಾಗುತ್ತೆ?

ಈ ಸಂಬಂಧ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಹಾಗೆ ಈ ಪ್ರಕರಣಕ್ಕೆ ರಾಜ್ಯಸರಕಾರದ ಮೂಲಕ ರಿಲೀಫ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಶ್ರೀಮತಿ ವೀಣಾಚಯ್ಯ, ಧರ್ಮಜಾ ಉತ್ತಪ್ಪ, ಇಸ್ಮಾಯಿಲ್, ಟಿ ಪಿ ರಮೇಶ್, ಕೊಲ್ಯದ ಗಿರೀಶ್ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button