Featured StoryINTERNATIONAL

ಪ್ಯಾಲೆಸ್ಟೈನ್-ಇಸ್ರೇಲ್ ಸಂಘರ್ಷದ ನಡುವೆ “ಇಸ್ರೇಲ್” ಗೆ ತಲೆ ನೋವಾದ ಗಡಿ ಉದ್ವಿಗ್ನತೆ – ವರದಿ

ಇಸ್ರೇಲ್-ಪ್ಯಾಲೆಸ್ತೈನ್ ನಡುವೆ ಆರಂಭಗೊಂಡ ಸಂಘರ್ಷ ಗಾಝಾದ ನಾಗರಿಕರ ಮೇಲೆ ಇಸ್ರೇಲ್ ನಿರಂತರವಾಗಿ ರಾಕೆಟ್ ದಾಳಿ ನಡೆಸುವುದರೊಂದಿಗೆ ಮುಂದುವರಿದಿದೆ‌.

ಪ್ಯಾಲೆಸ್ಟೈನ್ ಪರ ಹಮಾಸ್ ಸಂಘಟನೆ ಇಸ್ರೇಲ್ ವಿರುದ್ಧ ಅಕ್ಟೋಬರ್ 7 ರಂದು ಕಾರ್ಯಾಚರಣೆ ನಡೆಸಿದ ಪರಿಣಾಮ ಸುಮಾರು 1400 ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದರು. ಇಸ್ರೇಲ್ ಪ್ಯಾಲೆಸ್ಟೈನ್ ನಲ್ಲಿ ನಡೆಸುತ್ತಿರುವ ನಿರಂತರ ದೌರ್ಜನ್ಯ, ಅಲ್ ಅಕ್ಸಾ ಮಸೀದಿಯಲ್ಲಿನ ಇತ್ತೀಚಿನ ಕ್ರೌರ್ಯದ ವಿರುದ್ಧ ಈ ಕಾರ್ಯಾಚರಣೆ ಎಂದು ಹಮಾಸ್ ಸಂಘಟನೆ ಮಾಧ್ಯಮಗಳಿಗೆ ಮಾಹಿತಿ ನೀಡಿತ್ತು. ನಂತರ ಪ್ರತಿ ದಾಳಿ ಸಂಘಟಿಸಿದ ಇಸ್ರೇಲ್, ಗಾಝಾದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ 8000 ಸಾವಿರಕ್ಕೂ ಹೆಚ್ಚಿನ ಜನರನ್ನು ಇದುವರೆಗೆ ಹತ್ಯೆ ಮಾಡಿದೆ. ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿರುವುದಕ್ಕೆ ಇಡೀ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿದೆ. ಆಸ್ಪತ್ರೆ, ನಿರಾಶ್ರಿತ ಶಿಬಿರಗಳ ಮೇಲಿನ ದಾಳಿ ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಅನೇಕ ರಾಷ್ಟ್ರಗಳು ಹೇಳಿಕೆ ನೀಡಿವೆ. ವಿಶ್ವಸಂಸ್ಥೆಯ ನಿರ್ಣಯದಲ್ಲೂ ಕದನ ವಿರಾಮ ಹಾಕಲು ಬಹುಮತದದ ನಿರ್ಣಯ ಅಂಗೀಕಾರಗೊಂಡಿದೆ.

ಇದರ ನಡುವೆ ಇಸ್ರೇಲ್ ತನ್ನ ದಾಳಿ ಮುಂದುವರಿಸಿದೆ. ಆದರೆ ನೆಲದ ಆಕ್ರಮಣಕ್ಕೆ ಮೀನಾ ಮೇಷ ಎಣಿಸುತ್ತಿದ್ದ ಇಸ್ರೇಲ್’ಗೆ ಇಷ್ಟೊಂದು ದಾಳಿಯ ಹೊರತಾಗಿ ಸವಾಲು ಮಾತ್ರ ಸುಲಭವಿಲ್ಲ. ಈಗಾಗಲೇ ಹಮಾಸ್ ಸಂಘಟನೆಗೆ ಇರಾನ್ ದೇಶದ ಸಂಪೂರ್ಣ ಬೆಂಬಲ ಇರುವ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದರ ನಡುವೆ ಲೆಬನಿನಾ ಹಿಝ್ಬುಲ್ಲಾ ಬಂಡುಕೋರರು ಇಸ್ರೇಲನ್ನು ಕಾಡುತ್ತಿದ್ದಾರೆ. ಇರಾನಿನ ಭದ್ರ ನೆಲವಾದ ಸಿರಿಯಾದ ಮುಖಾಂತರವು ಇಸ್ರೇಲ್ ದಾಳಿಗೊಳಗಾಗುವ ಸಾಧ್ಯತೆ ಇದ್ದು ಇತ್ತೀಚೆಗೆ ಅದು ಸಿರಿಯಾದಲ್ಲಿರುವ ಇರಾನಿನ ಸೌಲಭ್ಯಗಳ ಮೇಲೆ ಏರ್’ಸ್ಟ್ರೈಕ್ ನಡೆಸಿತ್ತು. ಇದೀಗ ಹೊಸ ಬೆಳವಣಿಗೆಯಲ್ಲಿ ಕೆಂಪು ಸಮುದ್ರದ ಬಳಿ ಏಲಿಯೇಟ್ ನಗರದ ಬಳಿ ಏರ್’ಸ್ಟ್ರೈಕ್ ಭೀತಿ ಎದುರಾಗಿರುವ ಕುರಿತು ಅಲ್’ಜಝೀರಾ ವರದಿ ಮಾಡಿದೆ.

ಇಸ್ರೇಲ್-ಗಾಜಾ ಯುದ್ಧದ ಮಧ್ಯೆ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವಾಗ, ಕೆಂಪು ಸಮುದ್ರದ ನಗರವಾದ ಐಲಾಟ್ ಬಳಿ ಇಸ್ರೇಲಿ ವಾಯುಪ್ರದೇಶದ ಹೊರಗೆ ಸಮೀಪಿಸುತ್ತಿರುವ “ವೈಮಾನಿಕ ಗುರಿ” ಯನ್ನು ಹೊಡೆದುರುಳಿಸಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಮಂಗಳವಾರದ ಘಟನೆಯು ಜನಪ್ರಿಯ ಪ್ರವಾಸಿ ರೆಸಾರ್ಟ್‌ನಲ್ಲಿ ವಾಯುದಾಳಿ ಸೈರನ್‌ಗಳನ್ನು ಮೊಳಗಿ ನಿವಾಸಿಗಳು ಸುರಕ್ಷಿತ ಸ್ಥಳದತ್ತ ಒಡಿದ್ದರು. ಶಂಕಿತ ಡ್ರೋನ್‌ನ ಮೂಲವನ್ನು ದೃಢೀಕರಿಸಲಿಲ್ಲ, ಆದರೆ ಸ್ಥಳೀಯ ಮಾಧ್ಯಮ ವರದಿಗಳು ಇದು ಉತ್ತರ ಯೆಮೆನ್‌ನಿಂದ ಬಂದಿರಬಹುದು ಎಂದು ಸೂಚಿಸಿದೆ. ಇದು ಇರಾನ್ ಬೆಂಬಲಿತ ಗುಂಪು ಹೌತಿಗಳಿಂದ ನಡೆಸಲ್ಪಡುತ್ತದೆ ಎಂದು ತಿಳಿದು ಬಂದಿದೆ.

ಅಮೇರಿಕಾದ ಸಂಪೂರ್ಣ ಬೆಂಬಲದೊಂದಿಗೆ ಇಸ್ರೇಲ್ ದಾಳಿ ಮುಂದುವರಿಸಿದ್ದರೂ ನೆಲದ ಆಕ್ರಮಣವನ್ನು ಅತ್ಯಂತ ನಿಧನಗತಿಯಲ್ಲಿ ನಡೆಸುತ್ತಿರುವುದನ್ನು ಗಮನಿಸಿದರೆ ಇಸ್ರೇಲ್ ಅಂಜುತ್ತಿದೆಯೇ ಎಂಬ ಪ್ರಶ್ಬೆ ಮೂಡುತ್ತಿದೆ. ಇದರ ನಡುವೆ ಹಮಾಸ್ ಸಂಘಟನೆ ಈಗಾಗಲೇ ಹಲವು ಸುರಂಗ ಮಾರ್ಗಗಳ ಮುಖಾಂತರ ಸುರಕ್ಷಿತ ಸ್ಥಳಗಳನ್ನು ಸೃಷ್ಡಿಸಿರುವ ಕಾರಣ ಇಸ್ರೇಲ್ ಗಾಝ್ಹಾದ ಒಳ ಭಾಗಕ್ಕೆ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿಶ್ಲೇಷಣೆ ಅಂತರಾಷ್ಟ್ರೀಯ ಮಾಧ್ಯಮಗಳು ನಡೆಸುತ್ತಿವೆ.

ದೊಡ್ಡ ಮಟ್ಟದಲ್ಲಿ ಇಸ್ರೇಲ್ ನಡೆಸಿರುವ ವಾಯುದಾಳಿಯಿಂದಾಗಿ ಗಾಝಾ ಬಹುತೇಕ ಧ್ವಂಸಗೊಂಡಿದ್ಧರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ವರ್ಚಸ್ಸು ಕಡಿಮೆಯಾಗುತ್ತಿರುವುದು. ಹಲವು ದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದು ಇಸ್ರೇಲಿನ‌ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಇದರೊಂದಿಗೆ ಇಸ್ರೇಲ್ ಗಡಿಯ ನಾಲ್ಕು ಭಾಗದಿಂದ ಬಂಡುಕೋರರ ದಾಳಿ ಇಸ್ರೇಲ್’ಗೆ ಒತ್ತಡ ಸೃಷ್ಟಿಸಿದೆ ಎಂದು ಅಲ್’ಜಝೀರಾ ಮಾಧ್ಯಮ ವರದಿ ಮಾಡಿರುವುದು ಗಮನಾರ್ಹ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button