Featured StoryState News

ರಸ್ತೆ ದಾಟುತ್ತಿದ್ದಾಗ ಗರ್ಭಿಣಿ ಮಹಿಳೆಯೊಂದಿಗೆ ಸ್ನೇಹಿತೆಯೂ ಮೃತ್ಯು | ಮಗಳು-ಅಮ್ಮನಂತಿದ್ದ ಸಂಬಂಧ ರುಕಯ್ಯ-ಲಕ್ಷ್ಮಮ್ಮ ಸಂಬಂಧ ಸಾವಿನಲ್ಲಿ ಅಂತ್ಯ

ಬೆಂಗಳೂರು: ಅತಿವೇಗದಲ್ಲಿ ಬಂದ ಟ್ರಕ್ ಹರಿದು ಏಳು ತಿಂಗಳ ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಬೆಂಗಳೂರು- ಹೊಸೂರು ರಾಷ್ಟೀಯ ಹೆದ್ದಾರಿ 44 ರಲ್ಲಿನ ಬೊಮ್ಮಸಂದ್ರ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ.

ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿದ್ದ ಕಂದಮ್ಮ ಕೂಡ ಅಸುನೀಗಿದೆ. ಎಂಟು ತಿಂಗಳ ಗರ್ಭಿಣಿ ರುಕಿಯಾ (28) ಹಾಗೂ ಲಕ್ಷ್ಮಮ್ಮ (50) ಮೃತ ದುರ್ದೈವಿಗಳು.

ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೂವರು ಹೊಸೂರು-ಬೆಂಗಳೂರು ಹೆದ್ದಾರಿಯನ್ನು ದಾಟುತ್ತಿದ್ದಾಗ ಬ್ಯಾರಿಕೇಡ್ ಅಂತರವನ್ನು ದಾಟಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮಮ್ಮ ವರ್ತೂರಿನಲ್ಲಿ ನೆಲೆಸಿದ್ದರು. ಇವರಿಬ್ಬರು ಅಕ್ಕಪಕ್ಕದವರಾಗಿದ್ದರಿಂದ ಲಕ್ಷ್ಮಮ್ಮ ಅವರಿಗೆ ರುಕಯ್ಯ ಅವರ ಪರಿಚಯವಿತ್ತು.

ಲಕ್ಷ್ಮಮ್ಮ ನಗರಕ್ಕೆ ಪರಿಚಿತಳಾಗಿದ್ದರಿಂದ ರುಕಯ್ಯ ಮತ್ತು ರಬಿಯಾ ಖಾಸಗಿ ಆಸ್ಪತ್ರೆಗೆ ಜೊತೆಯಾಗಿ ಹೋಗುತ್ತಿದ್ದರು. ರಸ್ತೆ ದಾಟುತ್ತಿದ್ದಾಗ ಅತಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ರುಕಿಯಾ ಹಾಗೂ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಬ್ಬಗೋಡಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಎಂಟು ತಿಂಗಳು ಗರ್ಭಿಣಿಯಾದ್ದರಿಂದ ಸ್ಕೈವಾಕ್ ಹತ್ತಲಾಗದೆ ಬಸ್ ಇಳಿದವರೇ ನೇರ ಹೆದ್ದಾರಿ ದಾಟಿ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ಹೋಗಲು ಮುಂದಾಗಿದ್ದರು. ಈ ವೇಳೆ ಬೆಂಗಳೂರಿನ ಕಡೆಯಿಂದ ಅತ್ತಿಬೆಲೆ ಮಾರ್ಗವಾಗಿ ಬಂದ ಲಾರಿಯೊಂದು ಹೆದ್ದಾರಿ ದಾಟುತ್ತಿದ್ದ ಗರ್ಭಿಣಿ ಸೇರಿದಂತೆ ಜೊತೆಯಲ್ಲಿ ಬಂದಿದ್ದ ಪರಿಚಯಸ್ಥ ಮಹಿಳೆಯ ಮೇಲೆಯೂ ಲಾರಿ ಹರಿದು ಎರಡು ದೇಹಗಳು ಛಿದ್ರ ಛಿದ್ರಗೊಂಡಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button