Crime

ದಿಲ್ಲಿ ಹಿಂಸಾಚಾರ, ನಟ ದೀಪ್ ಸಿಧು ಬಂದನ

ನವದೆಹಲಿ,ಫೆ.9:- ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆಯ ಭಾಗವಾಗಿ ನಡೆದ ಟ್ರಾಕ್ಟರ್ ಮೆರವಣಿಗೆ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ದೆಹಲಿ ಪೊಲೀಸರು ಪಂಜಾಬೀ ನಟ ಹಾಗೂ ಗಾಯಕ ದೀಪ್ ಸಿಧು ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಜನವರಿ 26ರಂದೇ ದೀಪ್ ಸಿಧು ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದರೂ ಅವರು ತಪ್ಪಿಸಿಕೊಂಡಿದ್ದರು. ಅವರ ಪತ್ತೆಗೆ ದೆಹಲಿ ಕ್ರೈಮ್ ಬ್ರ್ಯಾಂಚ್‍ನ ಪೆÇಲೀಸರ ಹಲವು ತಂಡಗಳನ್ನ ರಚಿಸಲಾಗಿತ್ತು. ಎರಡು ವಾರಗಳ ಬಳಿಕ ಅವರ ಬಂಧನವಾಗಿರುವ ವಿಚಾರವನ್ನು ದೆಹಲಿ ಸ್ಪೆಷಲ್ ಪೊಲೀಸ್ ವಿಭಾಗದ ಡಿಸಿಪಿ ಸಂಜೀವ್ ಕುಮಾರ್ ಯಾದವ್ ಅವರು ತಿಳಿಸಿದ್ಧಾರೆ. ಆದರೆ, ಯಾವ ಸ್ಥಳದಿಂದ ಅವರನ್ನು ಅರೆಸ್ಟ್ ಮಾಡಲಾಯಿತು ಎಂಬ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿಲ್ಲ.
ದೆಹಲಿ ಪೊಲೀಸರು ದೀಪ್ ಸಿಧು ಅವರನ್ನ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ ಘೋಷಿಸಿದ್ದರು. ಜುಗರಾಜ್ ಸಿಂಗ್, ಗುರುಜೋತ್ ಸಿಂಗ್ ಮತ್ತು ಗುರಜಂತ್ ಸಿಂಗ್ ಅವರ ಸುಳಿವು ಕೊಟ್ಟವರಿಗೂ 1 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು. ಇದೇ ಹಿಂಸಾಚಾರ ಪ್ರಕರಣ ಸಂಬಂಧ ಜಾಜಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಅವರ ಮೇಲೆ 50 ಸಾವಿರ ರೂ ಬಹುಮಾನ ಕೊಡುವುದಾಗಿಯೂ ದೆಹಲಿ ಪೆÇಲೀಸರು ಪ್ರಕಟಣೆ ಹೊರಡಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button