
ಕೊಡಗು: ಪಂಪಿನ ಕೆರೆಯಲ್ಲಿ ಮಾಜಿ ಯೋಧ ಸಂದೇಶ್ ಮೖತದೇಹ ಪತ್ತೆ – ಈಶ್ವರ್ ಮಲ್ಪೆ ಅವರಿಂದ ಶೋಧ ಕಾರ್ಯ
ಹನಿಟ್ರ್ಯಾಪ್ ಗೆ ಮಡಿಕೇರಿಯಲ್ಲಿ ಬಲಿಯಾಗಿ ದುರಂತ ಸಾವು ಕಂಡ ನಿವೖತ್ತ ಯೋಧ ಸಂದೇಶ್
ಕಣ್ಮರೆಯಾಗಿ 30 ಗಂಟೆ ಬಳಿಕ ಕೊನೆಗೂ ಮೃತದೇಹ ಪತ್ತೆಯಾಗಿದೆ.ಕಳೆದ ಎರಡು ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದ ಅಗ್ನಿಶಾಮಕ ದಳ ಇದೀಗ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡದ ಪ್ರಯತ್ನ ಯಶಸ್ವಿಯಾಗಿ ರಾತ್ರಿ 8.20 ರ ಸುಮಾರಿಗೆ 40 ಆಡಿ ಆಳದಲ್ಲಿ ಪತ್ತೆಯಾಗುದೆ.
ಡೆತ್ ನೋಟ್ ನಲ್ಲಿ ಕೆಲವರ ಹೆಸರು:
ತನ್ನ ಸಾವಿಗೆ ಜೀವಿತ ಮತ್ತು ಆಕೆಯನ್ನು ಬೆಂಬಲಿಸುತ್ತಿದ್ದ ಪೊಲೀಸ್ ಸತೀಶ್ ಹಾಗೂ ರೆಸಾಟ್೯ ಮಾಲೀಕ ಸತ್ಯ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನಿನ್ನೆ ಸಂಜೆ ಪಂಪಿನ ಕೆರೆಗ ಹಾರಿ ಸಾವಿಗೀಡಾದ್ದರು.
ಸಂದೇಶ್ ಪತ್ನಿ ದೂರಿನ ಆಧಾರದ ಮೇರೆಗೆ ಸದ್ಯದಲ್ಲಿಯೇ ಜಿವಿತಾ ಬಂಧನ ಸಾಧ್ಯತೆಯಿದೆ. ಡೆತ್ ನೋಟ್ ನಲ್ಲಿ ಸಂದೇಶ್ ಹೆಸರಿಸಿದ್ದ ಇತರ ಇಬ್ಬರ ಮೇಲೂ ಪೊಲೀಸರ ಕ್ರಮದ ಸಾಧ್ಯತೆಯಿದೆ.
ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮಾಗ೯ದಶ೯ನದಲ್ಲಿಯೇ ಉನ್ನತ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ತನಿಖೆ ಮುಂದುವರಿದಿದೆ.




