Featured StoryNational

ಪೊಲೀಸರ ನಡುವೆ ಗುಂಡಿನ ಚಕಮಕಿ:ಶೃಂಗೇರಿ ಮೂಲದ ನಕ್ಸಲ್‌ ಮಹಿಳೆ ಸೆರೆ

ಕೇರಳದ ವಯನಾಡು ಜಿಲ್ಲೆಯಲ್ಲಿ ನಕ್ಸಲ್‌ ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಮಹಿಳೆಯೊಬ್ಬಳು ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬೆಳಗೋಡು ಕುಡಿಗೆಯ ಶ್ರೀಮತಿ ಅಲಿಯಾಸ್‌ ಉನ್ನಿಮಾಯ ಬಂಧನಕ್ಕೊಳಗಾದವಳು.

ತಳಪುಝ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಐವರು ನಕ್ಸಲರ ತಂಡ ಮಂಗಳವಾರ ರಾತ್ರಿ ಊಟಕ್ಕೆಂದು ತೆರಳಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಶರಣಾಗುವಂತೆ ಸೂಚಿಸಿದಾಗ ಗುಂಡಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಮೂವರು ನಕ್ಸಲರು ಪರಾರಿಯಾದರೆ, ನಕ್ಸಲ್‌ ಮುಖಂಡ ಕೇರಳ ಮೂಲದ ಚಂದ್ರು ಅಲಿಯಾಸ್‌ ತಿರುವೆಂದಿಗಮ್‌ ಹಾಗೂ ಶ್ರೀಮತಿಯನ್ನು ಪೊಲೀಸರು ವಶಕ್ಕೆ ಪಡೆದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button