Madikeri

ಕೈಕೇರಿ ಬಳಿ ಕಾರು ಆಟೋ ಪರಸ್ಪರ ಡಿಕ್ಕಿ ಆಟೋ ಚಾಲಕ ಗಂಭೀರ ಗಾಯ

ನಿನ್ನೆ ಸಂಜೆ ಗೋಣಿಕೊಪ್ಪಲು ಸಮೀಪದ ಕೈ ಕೇರಿಯ ಭಗವತಿ ದೇವಾಲಯದ ಮುಂಭಾಗದಲ್ಲಿ ವಿರಾಜಪೇಟೆ ಕಡೆಯಿಂದ ವೇಗವಾಗಿ ಬಂದ ಆಲ್ಟೊ ಕಾರು ಗೋಣಿಕೊಪ್ಪ ಕಡೆಯಿಂದ ಬರುತ್ತಿದ್ದ ಆಟೋಗೆ ಡಿಕ್ಕಿಯಾಗಿ ಆಟೋ ಚಾಲಕ ಕೈಕೇರಿ ನಿವಾಸಿ ಶಿವಣ್ಣ ನಾಯಕ ಗಂಭೀರ ಸ್ವರೂಪದ ಗಾಯಗಳು ಉಂಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಣಿಕೊಪ್ಪಲು ಪೊಲೀಸರು ಪ್ರಕರಣ ಕಲಿಸಿಕೊಂಡು ಆಲ್ಟೊ ಚಾಲಕ ಕಳತ್ಮಾಡಿನ ಸತೀಶ್ ವಿರುದ್ಧ ಮುಖದಮೆ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಂಭಂದ ಪಟ್ಟ ಇಲಾಖೆ ಕೈ ಕೊಳ್ಳಬೇಕು ಸಾರ್ವಜನಿಕರ‌ ಆಗ್ರಹ

ವಿರಾಜಪೇಟೆ ರಸ್ತೆಯ ನಯರ ಪೆಟ್ರೋಲ್ ಬ್ಯಾಂಕ್ ನಿಂದ ಕಳತ್ಮಡ್ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣಗೊಂಡು ಕಳೆದ ಮೂರು ವರ್ಷದಿಂದ ಅತಿ ಹೆಚ್ಚು ಅಪಘಾತಗಳು ಇಲ್ಲಿ ಸಂಭವಿಸುತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಪ್ರದೇಶವನ್ನು ಬ್ಲಾಕ್ ಸ್ಪಾಟ್ ಏರಿಯಾ ಎಂದು ಗುರುತಿಸಿ ಲೋಕೋಪಯೋಗಿ ಇಲಾಖೆ ಮೂಲಕ ಮುಂಜಾಗ್ರತಾ ಕ್ರಮವಾಗಿ ಹಲವು ಸೂಚನಾ ಫಲಕಗಳನ್ನು ಕೂಡ ಅಳವಡಿಸಲಾಗಿದೆ. ಹೀಗಿದ್ದರೂ ಇತ್ತೀಚಿಗೆ ಇಲ್ಲಿ ಸರಣಿ ಅಪಘಾತಗಳು ನಡೆಯುತ್ತಿದೆ. ಈ ಭಾಗದಲ್ಲಿ ಸಣ್ಣ ಪ್ರಮಾಣದ ವಾಹನ ವೇಗವನ್ನು ತಡೆಗಟ್ಟುವ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಅಪಘಾತಗಳು ತಡೆಯುವಲ್ಲಿ ಸಂಬಂಧಿಸಿದ ಇಲಾಖೆಯವರು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button