Udupi

ನೇಜಾರು ನಾಲ್ವರ ಹತ್ಯಾ ಪ್ರಕರಣ | ತೀವ್ರಗತಿಯಲ್ಲಿ ನಡೆಯುತ್ತಿದೆ ತನಿಖೆ

ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯಾ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ವಿಧಿ ವಿಜ್ಞಾನ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದೆ. ಇರಿದ ಚೂರಿಯ ಶೋಧ ಕಾರ್ಯ ಕೂಡ ನಡೆಯುತ್ತಿದೆ. ಮಾಹಿತಿಯ ಪ್ರಕಾರ ಕೃತ್ಯ ಎಸಗಿದ ಆರೋಪಿ ಆಟೋ ರಿಕ್ಷಾದಲ್ಲಿ ಬಂದು ಆಟೋ ದಲ್ಲಿ ತೆರಳಿರುವ ಕುರಿತು ಮಾಹಿತಿ ಲಭ್ಯವಾಗಿದೆ‌.

ಇದೀಗ ಮನೆಯಲ್ಲಿ ಮೃತದೇಹಗಳ ಮಹಜರು ನಡೆಯುತ್ತಿದ್ದು ಕೆಲವೇ ಹೊತ್ತಿನಲ್ಲಿ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ.

ಕುಟುಂಬದ ನಾಲ್ವರನ್ನು ಹತ್ಯೆಯಾಗಿದ್ದು ಉಳಿದಂತೆ ಒರ್ವ ಮಗ ಅಸಾದ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಹತ್ಯೆಯಾದ ಹಸೀನಾರ ಪತಿ ಹೊರ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button