Featured StoryUdupi

ನೇಜಾರು ಕೊಲೆ ಪ್ರಕರಣ: ಅಂತಿಮ ದರ್ಶನಕ್ಕೆ ಜನಸ್ತೋಮ

ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಅಂತಿಮ ಸಂಸ್ಕಾರ ಇಂದು ಕೋಡಿಬೆಂಗ್ರೆ ಜಾಮೀಯಾ ಮಸೀದಿಯ ದಫನ ಭೂಮಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಹತ್ಯೆಯಾದ ನಾಲ್ವರ ಮನೆಯಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದುಕೊಂಡರು.

ಮೃತ ಹಸೀನಾರ ಪತಿ ಮತ್ತು ಮಗ ವಿದೇಶದಿಂದ ಆಗಮಿಸಿದ್ದಾರೆ. ಇದುವರೆಗೆ ಆರೋಪಿ ಪತ್ತೆಗೆ ತೀವ್ರ ಪ್ರಯತ್ನ ಸಾಗುತ್ತಿದೆ. ಉಡುಪಿ ಡಿವೈಎಸ್ಪಿ ದಿನಕರ ಮತ್ತು ಕಾರ್ಕಳದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸ್ಥಳಕ್ಕೆ ಇಂದು ಭೇಟಿ ನೀಡಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button