
ಮಂಗಳೂರಿನಲ್ಲಿ ಅಂತರ್ರಾಷ್ಟ್ರೀಯ ಗುಣಮಟ್ಟದ ಈಜುಕೊಳ: ಏನಿದರ ವಿಶೇಷತೆ ಗೊತ್ತಾ?
ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನ ಎಮ್ಮೆಕೆರೆಯಲ್ಲಿ ಅಂತರ್ರಾಷ್ಟ್ರೀಯ ಗುಣ ಮಟ್ಟದ ಈಜುಕೊಳ ನಿರ್ಮಾಣಗೊಂಡಿದ್ದು ನವೆಂಬರ್ 24ರಂದು ಮುಖ್ಯ ಮಂತ್ರಿ ಲೋಕಾರ್ಪಣೆಗೊಳಿಸಲಿದ್ದಾರೆ.
24.94 ಕೋಟಿ ರೂ ವೆಚ್ಚದ ಈ ಈಜುಕೊಳವನ್ನು ಒಡಿಶಾ ಮೂಲದ ಕಂಪನಿಯೊಂದು ನಿರ್ಮಿಸಿದ್ದು, ಮೂರು ವರ್ಷಗಳ ಕಾಲ ಅವರೇ ನಿರ್ವಹಣೆ ಮಾಡಲಿದ್ದಾರೆ. ಅದೇ ದಿನ ರಾಷ್ಟ್ರ ಮಟ್ಟದ ಹಿರಿಯರ 19ನೇ ಈಜು ಸ್ಪರ್ಧೆ ನಡೆಯಲಿದೆ. ಅಂತರ್ರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಸಲು ಸೌಲಭ್ಯ ಇರುವ ಈ ಈಜುಕೊಳ ಹಲವು ವಿಶೇಷತೆಗಳನ್ನು ಒಳಗೊಂಡಿದೆ
ವಿಶೇಷತೆಗಳೇನು?:
* ಎರಡನೇ ಮಹಡಿಯಲ್ಲಿ ತೆರೆದ ಈಜುಕೊಳ
* ವಿವಿಧ ವಿಭಾಗಗಳಿಗೆ ಒಟ್ಟು 3 ಈಜು ಕೊಳ
* 50 ಮೀಟರ್ ಉದ್ದ 25 ಮೀ ಅಗಲದ ಪ್ರಮುಖ ಈಜುಕೊಳ
* 25 ಮೀ. ಉದ್ದ 10 ಮೀ. ಅಗಲದ ತರಬೇತಿ ಕೊಳ
* 13.8 ಮೀ ಉದ್ದ 10 ಮೀ ಅಗಲದ ಮಕ್ಕಳ ಈಜು ಕೊಳ
* ನೆಲ ಮಹಡಿಯಲ್ಲಿ ವಿಶಾಲವಾದ ಪಾರ್ಕಿಂಗ್
*ನೆಲ ಮಹಡಿಯಲ್ಲಿ ನೀರು ಶುದ್ಧೀಕರಣ ಘಟಕ
* ಮಹಿಳೆ, ಪುರುಷ ಅತ್ಲೆಟ್ಗಳಿಗೆ ವಿಶ್ರಾಂತಿ ನಿಲಯ
* ಸುಸಜ್ಜಿತ ಜಿಮ್
* ಸುಸಜ್ಜಿತ ವಸ್ತ್ರ ಬದಲಾವಣೆ ಕೊಠಡಿ, ಶೌಚಾಲಯ, ಲಾಕರ್ ವ್ಯವಸ್ಥೆ




