Featured StorySports

ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ – ಮುಹಮ್ಮದ್ ಶಮಿ ದಾಳಿಗೆ ನ್ಯೂಝಿಲೆಂಡ್ ಶರಣು

ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 398 ರನ್ ಗಳ ಬೃಹತ್ ಮೊತ್ತದ ಸವಾಲು ನೀಡಿತ್ತು

ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ನೇತೃತ್ವದ ತಂಡ ನಿಗದಿತ 50 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 397 ರನ್ ದಾಖಲಿಸಿತ್ತು. ಇದನ್ನು ಬೆನ್ನಟ್ಟಿದ ನ್ಯೂಝಿಲೆಂಡ್ ಮಿಚೆಲ್ ಅವರ ಶತಕದ ಹೊರತಾಗಿಯೂ ಸೋತಿದೆ.
ಭಾರತದ ಪರ ಮುಹಮ್ಮದ್ ಶಮಿ ಅದ್ಬುತ ಬೌಲಿಂಗ್ ದಾಳಿ ನಡೆಸಿ ಏಳು ವಿಕೆಟ್ ಕಬಳಿಸಿದರು. ಬುಮ್ರಾ ಕೂಡ ಉತ್ತಮ‌ ಬೌಲಿಂಗ್ ದಾಳಿ ನಡೆಸಿ ಒಂದು ವಿಕೆಟ್ ಪಡೆದರು.

ಈ ಮೊದಲು ಬ್ಯಾಟ್ ಬೀಸಿದ ಭಾರತ ಕೊಹ್ಲಿ – 117 (113 ಎಸೆತ), ಶ್ರೇಯಸ್ ಅಯ್ಯರ್ 105 (70 ಎಸೆತ), ಶುಭಮನ್‌ ಗಿಲ್ ಔಟಾಗದೆ 80* (66 ಎಸೆತ), ನಾಯಕ ರೋಹಿತ್ ಶರ್ಮಾ 47 (29 ಎಸೆತ), ಕೆ ಎಲ್ ರಾಹುಲ್ ಔಟಾಗದೆ 39(20 ಎಸೆತ) ರನ್‌ಗಳ ನೆರವಿನಿಂದ ಟೀಮ್ ಇಂಡಿಯಾ ವಾಂಖೆಡೆಯಲ್ಲಿ ನ್ಯೂಜಿಲೆಂಡ್ ವಿರುದ್ಧ 397 ಸ್ಕೋರ್ ದಾಖಲಿಸಿತು. ಸೆಮಿಫೈನಲ್‌ನಲ್ಲಿ ಭಾರತದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ಇದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button