Featured StoryUdupi

ನೇಜಾರು ಕೊಲೆ ಪ್ರಕರಣ: ಆರೋಪಿಯ ತೀವ್ರ ವಿಚಾರಣೆ | ಕುತೂಹಲದಿಂದ ಹತ್ಯೆಯಾದ‌ ಮನೆಯ ಬಳಿ ಜಮಾಯಿಸಿದ ಜನ!

ಉಡುಪಿ: ನೇಜಾರಿನ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆ (39) ಯನ್ನು ಪೊಲೀಸರು ವ್ಯಾಪಕ ವಿಚಾರಣೆ ನಡೆಸುತ್ತಿರುವ ಕುರಿತು ತಿಳಿದು ಬಂದಿದೆ.

ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯಾಧಾರ, ಕೊಲೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿಚಾರಣೆ ಸಾಗುತ್ತಿದೆ. ಇನ್ನುಳಿದಂತೆ ಆತ ಕೊಲೆ ಮಾಡುವ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸಿದ್ದಾನೋ, ಇಲ್ಲವೋ ಎಂಬ ಕುರಿತು ವಿಚಾರಣೆ ನಡೆಸಲಾಗುತ್ತಿದೆ.

ಇಂದು ಬೆಳಿಗ್ಗೆ ನೇಜಾರಿನ ಮನೆ ಬಳಿ ಬಹಳಷ್ಟು ಜನರು ಜಮಾಯಿಸಿದ್ದು ಆರೋಪಿಯನ್ನು ಮಹಜರಿಗೆ ತರುವ ಸಾಧ್ಯತೆಯಿದ್ದ ಕಾರಣ ಕುತೂಹಲದಿಂದ ಆರೋಪಿಯನ್ನು ನೋಡಲು ಬಂದಿದ್ದರು. ಆದರೆ ಪೊಲೀಸರು ಇದುವರೆಗೆ ಮಹಜರಿಗೆ ಸ್ಥಳಕ್ಕೆ ಬಂದಿಲ್ಲ ಎಂಬ ಮಾಹಿತಿ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button