Udupi

ಆರೋಪಿಯ ವಿರುದ್ಧ ಆಕ್ರೋಶಿತರಿಂದ ಪ್ರತಿಭಟನೆ | ಪ್ರಸ್ತುತ ಪರಿಸ್ಥಿತಿ ಶಾಂತ – ಉಡುಪಿ ಎಸ್ಪಿ

ಉಡುಪಿ:ದಿನಾಂಕ: 16/11/2023 ರಂದು ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 124/2023 ಕಲಂ:307, 302, 449, 324 ಐಪಿಸಿ ಪ್ರಕರಣದಲ್ಲಿ ಸಂಜೆ 4:45 ಗಂಟೆಗೆ ಘಟನೆ ನಡೆದ ಸ್ಥಳದಲ್ಲಿ ಆರೋಪಿ ತೋರಿಸಿಕೊಟ್ಟ ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದುಕೊಂಡ ಬಂದ ಸಮಯದಲ್ಲಿ, ಮೃತರ ಸಂಬಂಧಿಗಳು ಹಾಗೂ ಸ್ನೇಹಿತರು ಆರೋಪಿಯ ವಿರುದ್ದ ಫೋಷಣೆ ಕೂಗಿ ಮಹಜರು ಮುಗಿಸಿ ವಾಪಾಸು ಹೊರಡುವ ಸಮಯದಲ್ಲಿ ವಾಹನವನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದ್ದು, ಈ ಸಮಯ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿ ಆರೋಪಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಪ್ರಸ್ತುತ ಪರಿಸ್ಥಿತಿ ಶಾಂತವಾಗಿರುತ್ತದೆ. ಈ ಬಗ್ಗೆ ಆ ಸಮುದಾಯದ ಹಿರಿಯರೊಂದಿಗೆ ಚರ್ಚಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button