
Featured StoryDakshina Kannada
ಮಾಜಿ ಶಾಸಕ ಸಂಜೀವ ಮಠಂದೂರಿಗೆ ಹಾವು ಕಡಿತ
ಉಪ್ಪಿನಂಗಡಿ: ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಾವು ಕಡಿತಕ್ಕೊಳಗಾದ ಘಟನೆ ನ. 16ರಂದು ನಡೆದಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ರಾತ್ರಿಯ ಹೊತ್ತು ತನ್ನ ಮನೆಯ ಬಳಿ ವಾಕಿಂಗ್ ನಡೆಸುವಾಗ ಅವರಿಗೆ ಕಡಂಬಳ ( ಕಟ್ಟಮಳಕ್ಕರಿ) ಕಡಿದಿದ್ದು, ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೃಷ್ಟವಶಾತ್ ಹಾವಿನ ಕಡಿತದಿಂದ ತರಚಿದಂತ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ವಾಕಿಂಗ್ ಸಂದರ್ಭದಲ್ಲಿ ಅವರ ಜೊತೆಗಿದ್ದ ಹಿರೇಬಂಡಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿ ತಿಳಿಸಿದ್ದಾರೆ.




