
Udupi
ಕುಂದಾಪುರ | ಸಿಡಿಲು ಬಡಿದು ಮರಳು ಕಾರ್ಮಿಕ ಮೃತ್ಯು
ಕುಂದಾಪುರ, ನ. 25: ಸಿಡಿಲು ಬಡಿದು ಮರಳು ಕಾರ್ಮಿಕರೊಬ್ಬರು ಮೃತ ಪಟ್ಡ ಘಟನೆ ಶನಿವಾರ ಸಂಜೆ ಕಂಡ್ಲೂರು ಸಮೀಪದ ಹಳ್ನಾಡು ಹೊಳೆಯ ಮರಳು ಧಕ್ಕೆ ಬಳಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶ ಮೂಲದ ದೀಪ್ ಚಂದ್ (38) ಎಂದು ಗುರುತಿಸಲಾಗಿದೆ. ಇವರು ಹಳ್ನಾಡು ಹೊಳೆ ಬಳಿಯಲ್ಲಿರುವ ಶೆಡ್ ನಲ್ಲಿ ಮಾತಾಡುತ್ತಿತುವಾಗ ಸಿಡಿಲು ಬಡಿದಿದ್ದು ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು ಮೃತಪಟ್ಟರು.
ಇವರೊಂದಿಗೆ ಇದ್ದವರಿಗೂ ಸಿಡಿಲು ಬಡಿದಿದ್ದು, ಅವರು ತಕ್ಷಣ ನೀರಿಗೆ ಹಾರಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




