Tumakuru

ತುಮಕೂರು : ಬೈಕ್‌ನಿಂದ ಬಿದ್ದು ಸವಾರ ಸಾವು

ತುಮಕೂರು: ತಾಲ್ಲೂಕಿನ ಮಂಚಕಲ್‌ಕುಪ್ಪೆ ಬಳಿ ಭಾನುವಾರ ಬೈಕ್‌ನಿಂದ ಬಿದ್ದು ವೆಂಕಟೇಶ್‌ (38) ಎಂಬುವರು ಮೃತಪಟ್ಟಿದ್ದಾರೆ.

ಇವರು ವೆಂಕಟೇಶ್‌ ನಗರದ ಹನುಮಂತಪುರದ ನೀವಾಸಿಯಾಗಿದ್ದು, ದಾಬಸ್‌ಪೇಟೆಯ ಸೂಲಕುಂಟೆ ಗ್ರಾಮದಲ್ಲಿ ಬೀಗರ ಮನೆಗೆ ಊಟಕ್ಕೆ ಹೋಗಿ ವಾಪಸ್‌ ಬರುವಾಗ ಬೈಕ್‌ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button