
Featured StoryINTERNATIONAL
ಇಸ್ರೇಲ್-ಗಾಜಾ ಯುದ್ದ: 12 ಒತ್ತೆಯಾಳು ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ನಿಂದ 30 ಪ್ಯಾಲೇಸ್ಟಿನಿಯನ್ ಒತ್ತೆಯಾಳುಗಳು ರಿಲೀಸ್
ರಾಫಾ: ಕದನ ವಿರಾಮದ ಭಾಗವಾಗಿ ಈ ಹಿಂದೆ ಇಸ್ರೇಲ್ ಹಾಗೂ ಹಮಾಸ್ ಒಪ್ಪಿಕೊಂಡಂತೆ ಒತ್ತೆಯಾಳುಗಳು ಹಾಗೂ ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆಯಾಗುತ್ತಿದೆ. 12 ಇಸ್ರೇಲಿಯನ್ನರನ್ನು ಹಮಾಸ್ ಬಿಡುಗಡೆ ಮಾಡಿದ್ದರೆ, ಇಸ್ರೇಲ್ 30 ಮಂದಿ ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಹಮಾಸ್ ಹೋರಾಟಗಾರರು ಸುಮಾರು 240 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಹತ್ತು ಇಸ್ರೇಲಿಗಳು ಮತ್ತು ಇಬ್ಬರು ಥಾಯ ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಹೇಳಿದೆ, ಅವರನ್ನು ರೆಡ್ಕ್ರಾಸ್ಗೆ ಹಸ್ತಾಂತರಿಸಲಾಗಿದೆ.




