
ಕೋವಿಡ್ ನಂತರದ ಆರೈಕೆ ಕೇಂದ್ರ: ತಜ್ಞರ ಸಲಹೆ
ಬೆಂಗಳೂರು,ಫೆ.13:- ಕೊರೊನಾ ನಂತರ ಅನುಭವಿಸುವ ಸಮಸ್ಯೆಗಳಿಗೆ ಪರಿಹಾರ ನೀಡುವ ದೃಷ್ಟಿಯಿಂದ ಪೆÇೀಸ್ಟ್ ಕೋವಿಡ್ ಕೇಂದ್ರಗಳನ್ನು ಕರ್ನಾಟಕದಲ್ಲಿ ಆರಂಭಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ನಂತರದ ಆರೈಕೆ ಕೇಂದ್ರ ಆರಂಭಿಸಬೇಕು. ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಿಗೆ ಇದರಿಂದ ಅನುಕೂಲವಾಗುತ್ತದೆ. ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19 ರ ಮಧ್ಯಮ ಮತ್ತು ದೀರ್ಘಕಾಲೀನ ಪರಿಣಾಮಗಳಿಗೆ ಪುನರ್ವಸತಿಗೆ ಆದ್ಯತೆ ನೀಡುವಂತೆ ಮತ್ತು ಕೋವಿಡ್ ನ ದೀರ್ಘಾವಧಿ ಪರಿಣಾಮ ಕುರಿತು ಮಾಹಿತಿಯನ್ನು ಹೆಚ್ಚು ವ್ಯವಸ್ಥಿತವಾಗಿ ಸಂಗ್ರಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ರಾಷ್ಟ್ರಗಳಿಗೆ ಸಲಹೆ ನೀಡಿದೆ.
ಐಸಿಯುನಲ್ಲಿರುವ ಕೋವಿಡ್ ರೋಗಿಗಳಿಗೆ ನಂತರವೂ ಸಮಸ್ಯೆ ಇರುತ್ತದೆ. ಶ್ವಾಸಕೋಶ, ಹೃದಯ ಸಮಸ್ಯೆ, ಮೈಕೈ ನೋವು ಎಂದು ಹೇಳಿಕೊಂಡು ಬರುತ್ತಾರೆ. ಕೋವಿಡ್ ಸೋಂಕು ಗುಣಮುಖವಾದ ನಂತರ ಕಾಣಿಸಿಕೊಳ್ಳುವ ಸಮಸ್ಯೆ ಬಗೆಹರಿಯಬೇಕಾದುದು ಮುಖ್ಯವಾಗಿದೆ. ಮಾನಸಿಕ ಸಮಸ್ಯೆಗಳಿಗೆ ಸಹ ಕೌನ್ಸೆಲಿಂಗ್ ಮಾಡಬೇಕಾಗುತ್ತದೆ.
ಶ್ವಾಸಕೋಶದ ಪರೀಕ್ಷೆ, ಆರು ನಿಮಿಷಗಳ ನಡಿಗೆ ಪರೀಕ್ಷೆ ಮತ್ತು ಬಿ-ಡೈಮರ್ ಪರೀಕ್ಷೆಗಳನ್ನು ನಡೆಸಿ, ಮೌಲ್ಯಮಾಪನ ಮಾಡಬೇಕಾಗುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಮಂಜುನಾಥ್ ತಿಳಿಸಿದ್ದಾರೆ.
ಕೋವಿಡ್ ದೀರ್ಘಾವಧಿ ಪರಿಣಾಮ ಎಂದು ಕರೆಯಲ್ಪಡುವ ಅಂದಾಜಿನ ಪ್ರಕಾರ, ತೀವ್ರವಾದ ಸೋಂಕಿನಿಂದ ಬಳಲುತ್ತಿರುವ ಸುಮಾರು ಶೇಕಡಾ 75 ಪ್ರತಿಶತದಷ್ಟು ರೋಗಿಗಳು ಎದೆ ನೋವು, ಉಸಿರಾಟದ ತೊಂದರೆ, ಆಯಾಸ, ಒತ್ತಡ ಮತ್ತು ಆತಂಕದ ದೂರುವುದು ಸಾಮಾನ್ಯವಾಗಿದೆ.




