Dakshina Kannada

ಮಂಗಳೂರು: ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಪರಾರಿಯಾದ ನಕಲಿ ಫೈನಾನ್ಸ್ ಸಂಸ್ಥೆ

ಮಂಗಳೂರು: ನಗರದ ಪಿವಿಎಸ್ ಬಳಿ ಎರಡೂವರೆ ವರ್ಷದ ಹಿಂದೆ ಪ್ರಾರಂಭಗೊಂಡ ಪಿಗ್ಮಿ ಸಂಗ್ರಹ ಕಂಪನಿಯೊಂದು ಇದೀಗ ಗ್ರಾಹಕರಿಂದ ಲಕ್ಷಾಂತರ ರುಪಾಯಿ ಸಂಗ್ರಹಿಸಿ ಪರಾರಿಯಾಗಿದೆ.

ರಾಯಲ್ ಟ್ರಾವಂಕೂರು ಫಾರ್ಮರ್ಸ್ ಪ್ರೊಡ್ಯೂಸರ್ ಹೆಸರಲ್ಲಿ ಸಂಸ್ಥೆ ಈ ನಕಲಿ ಕಂಪನಿ ಪ್ರಾರಂಭಗೊಂಡಿದ್ದು, ಜನರ ಬಳಿ ತೆರಳಿ, ಬಣ್ಣದ ಮಾತುಗಳನ್ನಾಡಿ ಪಿಗ್ಮಿ ಸಂಗ್ರಹ ಮಾಡಿದ್ದರು.
ಆದರೆ, ಈ ವರ್ಷದ ನವೆಂಬರ್ ಅಂತ್ಯದ ಬಳಿಕ ಫಿಗ್ಮಿ ಕಲೆಕ್ಟರ್ ಬಾರದಿದ್ದರಿಂದ ಹಣ ಕಟ್ಟಿದವರು ಆತನಿಗೆ ಫೋನ್ ಮಾಡಿದ್ದಾರೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಅನುಮಾನ ಬಂದು ಕಚೇರಿಗೆ ಬಂದು ನೋಡಿದಾಗ ಕಂಪನಿಯು ಬೀಗ ಜಡಿದು ದುಡ್ಡಿನೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಮೋಸಕ್ಕೊಳಗಾದ ಗ್ರಾಹಕರು ಶುಕ್ರವಾರ ರಾಯಲ್ ಟ್ರಾವಂಕೂರು ಸಂಸ್ಥೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button