
Accident NewsBidar
ಬೀದರ್ | ಆಟೊ ಡಿಕ್ಕಿ: ವ್ಯಕ್ತಿ ಮೃತ್ಯು
ಬೀದರ್ : ಬೀದರ್-ನಾಂದೇಡ್ ಮುಖ್ಯ ರಸ್ತೆಯ ವನಮಾರಪಳ್ಳಿ ಬಳಿ ಆಟೊ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರು ಜಿಲ್ಲೆಯ ಔರಾದ ತಾಲ್ಲೂಕಿನ ಇಟಗ್ಯಾಳ ಗ್ರಾಮದ ರಾಮ (39) ಎಂದು ಗುರುತಿಸಲಾಗಿದೆ.
ಡಿ. 17ರಂದು ಈ ಘಟನೆ ನಡೆದಿದೆ. ಮೃತರ ಪತ್ನಿ ಚಂದ್ರಕಲಾ ಪೊಲೀಸರಿಗೆ ದೂರು ನೀಡಿದ್ದು, ’ವನಮಾರಪಳ್ಳಿ ಬಳಿ ನನ್ನ ಗಂಡ ನಡೆದುಕೊಂಡು ಹೋಗುವಾಗ ಆಟೊ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
THG ಬೀದರ್




