Featured StoryState News

ಮಡಿಕೇರಿ | ತಪ್ಪು ಮಾಡಿದ್ದರೆ ನನಗೆ ಮರಣ ದಂಡನೆ ನೀಡಿ| ನಗರ ಸಭೆ ಸಭೆಯಲ್ಲಿ ಸದಸ್ಯರ ಆರೋಪಗಳ ಸುರಿಮಳೆ | ಪೌರಾಯುಕ್ತ ಭಾವುಕ

ಇಂದು ನಡೆದ ಮಡಿಕೇರಿ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತರ ಮೇಲೆ ನೇರ ಆರೋಪಗಳ ಸುರಿಮಳೆ ಕೇಳಿ ಬಂತು.

ನಾನು ಬಂದಾಗ ಉತ್ಸಹದಿಂದ ಕೆಲಸ ಮಾಡುತ್ತಿದ್ದೆ. ಆದ್ರೆ ಆಮೇಲೆ ಅಧಿಕಾರಿ, ಸಿಬ್ಬಂದಿಗಳು ವರ್ಗಾವಣೆ ಆದರು. ನಾನು ಒಬ್ಬಂಟಿ ಆಗಿ ಕೆಲ್ಸ ಮಾಡಲು ಅಸಾದ್ಯ ಆಗಿದೆ. ನಾನು ತಪ್ಪು ಮಾಡಿದ್ದು ಸಾಬೀತಾದ್ರೆ ನನಗೆ ಮರಣ ದಂಡನೆ ನೀಡಿ ಎಂದು ಈ ಸಂದರ್ಭದಲ್ಲಿ ಪೌರಾಯುಕ್ತ ವಿಜಯ್ ಭಾವುಕರಾಗಿದ್ದಾರೆ.

ಜನಪ್ರತಿನಿಧಿ ಗಳು ಮತ್ತು ಜನರ ನಡುವೆ ಪೌರಾಯುಕ್ತರು ಕೆಟ್ಟ ಅಭಿಪ್ರಾಯ ಬರಲು ಕಾರಣ ಆಗಿದ್ದಾರೆ. ನನ್ನ ಸ್ವಂತ ಕಟ್ಟಡಕ್ಕೆ ಫಾರಂ 3 ಪಡೆಯಲು ಅಸಾದ್ಯ ಆಗುವ ಸ್ಥಿತಿ ಇದೇ ಎಂದು ಸದಸ್ಯೆ ಶ್ವೇತಾ ಪ್ರಶಾಂತ್ ಅಸಮಾಧಾನ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಗೂಟ ಹೊಡೆದು ಕುಳಿತ ಅಧಿಕಾರಿಗಳನ್ನು ಇಲ್ಲಿಂದ ಕಳುಹಿಸಬೇಕು ಎಂದು ಸದಸ್ಯ ಅಪ್ಪಣ್ಣ ಆಕ್ರೋಶ ಹೊರಹಾಕಿದ್ದಾರೆ.

ನಗರಸಭೆಯಲ್ಲಿ ಜನರ ಕೆಲಸ ಆಗುತ್ತಿಲ್ಲ. ನನಗೇ ನಗರಸಭೆಗೆ ಬರಲು ಕಷ್ಟ ಆಗುತ್ತಿದೆ.
ಬಿಜೆಪಿ ಸದಸ್ಯ ಅಪ್ಪಣ್ಣ ಆರೋಪಿಸಿದರು.

ಆಡಳಿತ ಪಕ್ಷದ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ಬಗ್ಗೆ ಅಸಮಾಧಾನ
ನಗರಸಭೆ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ.
ಅಧಿಕಾರಿಗಳು ಕೆಲಸ ಮಾಡದೆ ಆಡಳಿತ ಮಂಡಳಿಗೆ ಕೆಟ್ಟ ಹೆಸರು ತರುತಿದ್ದಾರೆ. ಬಿಜೆಪಿ ಸದಸ್ಯರಾದ ಸತೀಶ್, ಉಮೇಶ್ ಸುಬ್ರಮಣಿ ನೇರ ಆರೋಪ ಮಾಡಿದ್ದಾರೆ.

ಯಾರದ್ದೋ ಮಾತು ಕೇಳಿಕೊಂಡು ಅದ್ಯಕ್ಷರು ದಾರಿ ತಪ್ಪಿದ್ದಾರೆ. ಇನ್ನಾದರೂ ಅಧಿಕಾರಿಗಳನ್ನು ಸರಿಯಾದ ಮಾರ್ಗ ದರ್ಶನ ಮೂಲಕ ಆಡಳಿತ ಸರಿ ಪಡಿಸಿಕೊಳ್ಳಲಿ ಎಂದು ಸದಸ್ಯ ಅಮೀನ್ ಮುಹ್ಸಿನ್ ಹೇಳಿದರು

ಕಾಂಗ್ರೆಸ್ ಸದಸ್ಯ ರಾಜೇಶ್ ಎಲ್ಲಪ್ಪ ಮಾತನಾಡಿ, ಆಡಳಿತ ಅವಧಿ ಮುಕ್ತಾಯ ಹಂತದಲ್ಲಿ ಇದೆ. ಹೀಗಾಗಿ ನೀವು ಆಸಕ್ತಿ ಕಳೆದುಕೊಂಡ ಹಾಗೆ ಕಾಣುತ್ತ ಇದೇ.25 ವರ್ಷಗಳಲ್ಲಿ ಇಂಥ ಆಡಳಿತ ಮಡಿಕೇರಿ ಜನ ನೋಡಿಲ್ಲ.ನನಗೂ ನಗರಸಭೆಗೆ ಬರಲು ಆಗದ ಪರಿಸ್ಥಿತಿ ಇದೆ. ಇಂಥ ಸ್ಥಿತಿ ಮುಂದುವರಿದರೆ ಜನ ನಗರಸಭೆಗೆ ಕಲ್ಲು ಹೊಡೆಯುವ ದಂಗೆ ಏಳುವ ಪರಿಸ್ಥಿತಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು

ಕೆ.ಎಸ್. ರಮೇಶ್ ಮಾತನಾಡಿ, ಅಧಿಕಾರಿಗಳ ಮೇಲೆ ಕೋರ್ಟ್ ಗೆ ಹೋಗಿ. ಕೆಲಸ ಮಾಡದ ಅಧಿಕಾರಿಗಳು ಮಡಿಕೇರಿಗೆ ಬೇಡ. ನಮ್ಮ ಆಡಳಿತದ ಮೇಲೆ ಆರೋಪ ಮಾಡುವ ದುಸ್ಥಿತಿ ಇದೆ.
ಇದಕ್ಕೆ ಪೌರಾಯುಕ್ತರೆ ಮೂಲ ಕಾರಣ ಎಂದರು.

ಮಹೇಶ್ ಜೈನಿ ಮಾತನಾಡಿ, ಸದಸ್ಯರು ಹೇಳಿದ ಕೆಲ್ಸ ಮಾಡಬಾರದು ಎಂದು ಸಿಬ್ಬಂದಿಗೆ ಪೌರಾಯುಕ್ತ ಸೂಚನೆ ನೀಡಿದ್ದಾರೆ. ವಿಚಿತ್ರ ವರ್ತನೆ ಸಿಬ್ಬಂದಿಗಳ ಮೂಲಕ ಆಗ್ತಾ ಇದೆ ಎಂದು ಆರೋಪ ಮಾಡಿದರು.
ಫೋರಂ ನಂಬರ್ 3 ಆಗದೆ ಜನ ಹೈರಾಣ ಆಗಿದ್ದಾರೆ ಎಂದು ಹಿಗ್ಗಾ ಮುಗ್ಗಾ ಆರೋಪ ಕೇಳಿ ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button