Featured StoryUdupi

ಬ್ರಹ್ಮಾವರ:ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ಆರೋಪ – ಪ್ರಕರಣ ದಾಖಲು

ಬ್ರಹ್ಮಾವರ: ಮಹೇಶ್ ಆಸ್ಪತ್ರೆಯ ವೈದ್ಯರೊಬ್ಬರಿಗೆ ಹಲ್ಲೆ ಮಾಡಿದ ಆರೋಪದಲ್ಲಿ‌ ಪ್ರಕರಣ ದಾಖಲಾಗಿದೆ

ಡಾ| ರಾಕೇಶ್‌(52)  ಮೆಡಿಕಲ್‌ ಡೈರೆಕ್ಟರ್‌ ಮತ್ತು ಮಾಲಕರು ಮಹೇಶ್‌ ಆಸ್ಪತ್ರೆ ಬ್ರಹ್ಮಾವರ ರವರು ದಿನಾಂಕ 21.12.2023 ರಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿರುವಾಗ ಆಸ್ಪತ್ರೆ ಎದುರಿನ ರಾ.ಹೆ 66 ರಲ್ಲಿ ದ್ವಿಚಕ್ರ ವಾಹನ ಅಪಘಾತಗೊಂಡ ಕಾರಣ ಹೇಳಿ ಇಬ್ಬರು  ಯುವಕರು ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಿದ್ದು, ಕರ್ತವ್ಯದಲ್ಲಿದ್ದ ಡಾ.ರಾಕೇಶ್ ಪರಿಕ್ಷೀಸಿದಾಗ ಒಬ್ಬನ  ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ತಪಾಸಣೆ ಮಾಡುವಾಗ ತಪಾಸಣೆಯನ್ನು ನಿರಾಕರಿಸಿ ತುರ್ತು ಚಿಕಿತ್ಸಾ ವಿಭಾಗದಿಂದ ಹೊರ ಹೋಗಿದ್ದಾರೆ.‌ನಂತರ ಪುನಃ ಸಂಜೆ 7:00 ಗಂಟೆಗೆ ಅವರು ತುರ್ತು ಚಿಕಿತ್ಸಾ ವಿಭಾಗಕ್ಕೆ ವಾಪಾಸ್ಸು ಬಂದು ಕರ್ತವ್ಯದಲ್ಲಿದ್ದ ವೈದ್ಯರಿಗೆ ಚಿಕಿತ್ಸೆ ನೀಡುವಂತೆ ತಿಳಿಸಿದ ನಂತರ ಚಿಕಿತ್ಸೆ ನೀಡುವ ಹಂತದಲ್ಲಿ ಗಾಯಳುವಿನ ಜೊತೆಯಲ್ಲಿದ್ದ  ಆರೋಪಿಗೆ ತುರ್ತು ಚಿಕಿತ್ಸಾ ವಿಭಾಗದಿಂದ ಹೊರ ಹೋಗುವಂತೆ ವಿನಂತಿಸಿದ್ದು, ಆಗ ಆತ ತುರ್ತು ಚಿಕಿತ್ಸಾ ವಿಭಾಗದ ಬಾಗಿಲನ್ನು ಒತ್ತಾಯ ದಿಂದ ದೂಡಿ, ಕರ್ತವ್ಯದಲ್ಲಿದ್ದ ವೈದ್ಯರಿಗೆ ಚಿಕಿತ್ಸೆ ನೀಡುವಲ್ಲಿ ಅಡ್ಡಿಪಡಿಸಿ  ಮೊಬೈಲ್‌ ನಲ್ಲಿ ಚಿತ್ರೀಕರಣ ಮಾಡುವ ಪ್ರಯತ್ನದಲ್ಲಿದ್ದಾಗ  ಚಿತ್ರೀಕರಣ ಕಾನೂನು ಬಾಹಿರ, ಚಿತ್ರೀಕರಣ ಮಾಡಲು ಸಾಧ್ಯವಿಲ್ಲ ವೆಂದು ಆರೋಪಿಗೆ ಮನವರಿಕೆ ಮಾಡುವಾಗ ಸಮಯ ಸಂಜೆ 7:06 ಗಂಟೆಯ ಸುಮಾರಿಗೆ ಕರ್ತವ್ಯದಲ್ಲಿದ್ದ ವೈದ್ಯರಿಗೆ ಆರೋಪಿಯು ಕೈಯಿಂದ ಮುಖಕ್ಕೆ  ಮತ್ತು ಕುತ್ತಿಗೆಗೆ ಹೊಡೆದು, ಚಿಕಿತ್ಸೆ ನೀಡದಂತೆ ತಡೆದು ಅಡ್ಡಿಪಡಿಸಿರುವ ಕುರಿತು ದೂರಿನಲ್ಲಿ ಆರೋಪಿಸಲಾಗಿದೆ.

ಆಸ್ಪತ್ರೆಯ ಸಿಬ್ಬಂದಿಗಳನ್ನು ಕರೆದಾಗ ಆರೋಪಿಯು ತುರ್ತು ಚಿಕತ್ಸಾ ವಿಭಾಗದಿಂದ ನಿರ್ಗಮಿಸಿರುತ್ತಾನೆ.  ಬಳಿಕ ಗಾಯಾಳು ಸಹ ವೈದ್ಯರ ಅನುಮತಿ ಇಲ್ಲದೇ ನಿರ್ಗಮಿಸಿರುತ್ತಾನೆ.  ನಂತರ ಆರೋಪಿಯು ಆಸ್ಪತ್ರೆಯ ಹೊರಗಡೆ ಪಾರ್ಕ್‌ ಮಾಡಿದ್ದ KA.20.HB.8666 ನೇ ಮೋಟಾರ್‌ ಸೈಕಲ್‌ ನಲ್ಲಿ  ಹೋಗುವಾಗ ವೈದ್ಯರಿಗೆ ಅವಾಚ್ಯವಾಗಿ ಬೈದು , ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  246/2023 : ಕಲಂ  323, 341, 504, 506 ಐಪಿಸಿ & 3, 4 The Karnataka Prohibition of Violence against Medicare Service Personnel And Damage to Property in Medicare Service Institutions Act 2009 ರಂತೆ ಪ್ರಕರಣ ದಾಖಲಿಸಲಾಗಿದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button