Dakshina Kannada

ಡಿ. 24 ರಂದು ಸಂವಿಧಾನ ಪ್ರಜಾಪ್ರಭುತ್ವ ಉಳಿವಿಗಾಗಿ ದ‌.ಸಂ.ಸ.ಸಮಾವೇಶ

ಇದೇ ಬರುವ ಡಿಸೆಂಬರ್ 24 -12-2023ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ನಡೆಯುವ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ” ದಲಿತರ – ಶೋಷಿತರ ಹಕ್ಕುಗಳಿಗಾಗಿ ಆಗ್ರಹಿಸಿ ” ಜಿಲ್ಲಾ ಮಟ್ಟದ ಜಾಗ್ರತಿ ಸಮಾವೇಶವನ್ನು , ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯಾ ಯು.ಟಿ.ಖಾದರ್ ಫರೀದ್ ರವರು ಉಧ್ಘಾಟಿಸಲಿದ್ದಾರೆ.

ಉಡುಪಿ ಬನ್ನಂಜೆಯ ಶ್ರೀ.ನಾರಾಯಣ ಗುರು ಸಭಾ ಭವನದಲ್ಲಿ ಬೆಳಿಗ್ಗೆ 11 ಘಂಟೆಗೆ ನಡೆಯುವ ಸಮಾವೇಶದ ಅಧ್ಯಕ್ಷತೆಯನ್ನು ದ.ಸಂ.ಸ.ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀಯುತ ಸುಂದರ ಮಾಸ್ತರ್ ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ರಾಜ್ಯ ಪ್ರಧಾನ ಸಂಚಾಲಕರಾದ ಅಣ್ಣಾ ಮಾವಳ್ಳಿ ಶಂಕರ್ ಆಗಮಿಸಲಿದ್ದಾರೆ.
ಸಮಾವೇಶದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಜಿ ಸಚಿವರಾದ ಶ್ರೀ. ವಿನಯಕುಮಾರ್ ಸೊರಕೆ ಹಾರಾರ್ಪಣೆ ಗೈಯ್ಯಲಿದ್ದಾರೆ.

ಸಮಾವೇಶದ ಮುಖ್ಯ ಅತಿಥಿಗಳಾಗಿ ಶ್ರೀ. ಪ್ರಸಾದ್ ರಾಜ್ ಕಾಂಚನ್ , ನಾಗಣ್ಣ ಬಡಿಗೇರ್ , ಸಿದರಾಜು ದೊಡ್ಡಿಂದವಾಡಿ , ರಮೇಶ್ ಕಾಂಚನ್ , ಮಲ್ಲೇಶ್ ಅಂಬುಗ , ಚಂದು .ಎಲ್ , ಮಂಜುನಾಥ್ ಗಿಳಿಯಾರು , ಸುಂದರ ಗುಜ್ಜರಬೆಟ್ಟು , ಶ್ರೀಮತಿ. ವಸಂತಿ ಶಿವಾನಂದ ಆಗಮಿಸುವರು.

ಅಂದು ಕಾರ್ಯಕ್ರಮದಲ್ಲಿ ಗೌರವದ ಉಪಸ್ಥಿತಿಯೊಂದಿಗೆ ವೇಧಿಕೆ ಹಂಚಿಕೊಳ್ಳಲಿರುವವರು ಫಾ.ವಿಲಿಯಂ ಮಾರ್ಟಿಸ್ , ಫ್ರೋ.ಪಣಿರಾಜ್ , ರಮೇಶ್ ಪಾಲ್ , ಯಾಸೀನ್ ಮಲ್ಪೆ , ಪ್ರಶಾಂತ್ ಜತ್ತನ್ನ , ಬಾಲಕೃಷ್ಣ ಶೆಟ್ಟಿ , ವಾಸುದೇವ ಮುಧೂರು , ಅಣ್ಣಪ್ಪ ನಕ್ರೆ , ಭಾಸ್ಕರ ಮಾಸ್ಟರ್ , ಮಂಜುನಾಥ್ ಬಾಳ್ಕದ್ರು , ಶ್ರೀಧರ ಕುಂಜಿಬೆಟ್ಟು , ಪರಮೇಶ್ವರ ಉಪ್ಪೂರು , ಶ್ಯಾಮರಾಜ್ ಬಿರ್ತಿ , ಶ್ಯಾಮ ಸುಂದರ ತೆಕ್ಕಟ್ಟೆ , ಎಸ್.ಎಸ್.ಪ್ರಸಾದ್.
ಅಂದು ಹೋರಾಟದ ಹಾಡುಗಳನ್ನು ಶಂಕರ್ ದಾಸ್ ಚೆಂಡ್ಕಳ ಮತ್ತು ಮೂರ್ತಿ ಬಿಸ್ನಳ್ಳಿ ಯವರ ತಂಡ ನಡೆಸಿಕೊಡಲಿದೆ.

ಜಿಲ್ಲೆಯ ಎಲ್ಲಾ ಪ್ರಜಾಪ್ರಭುತ್ವ ವಾದಿ ಸಂವಿಧಾನ ಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ತನ್ನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button