
Dakshina KannadaFeatured Story
ಮಂಗಳೂರು: ಅನೈತಿಕ ‘ಪೋಲಿ’ಸ್‌ಗಿರಿ: ಮೂವರ ಬಂಧನ
ಮಂಗಳೂರು: ಜೊತೆಯಾಗಿ ತೆರಳುತ್ತಿದ್ದ ಭಿನ್ನ ಸಮುದಾಯದ ಸಹಪಾಠಿಗಳ ಜೊತೆ ಅನುಚಿತವಾಗಿ ವರ್ತಿಸಿ, ಅನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸಂದೇಶ್(28), ಪ್ರಶಾಂತ್ (31) ಮತ್ತು ರೋಣಿತ್ (31) ಬಂಧಿತರು. ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ಓರ್ವ ಯುವಕ ಮತ್ತು ಇಬ್ಬರು ಯುವತಿಯರು ಜೊತೆಯಾಗಿ ಹೋಗುತ್ತಿದ್ದರು.
ಇವರು ಮೂವರೂ ಕೇರಳ ಮೂಲದವರೆಂದು ಹೇಳಲಾಗುತ್ತಿದ್ದು, ಮಿಲಾಗ್ರಿಸ್ ಮೂಲಕ ರೈಲು ನಿಲ್ದಾಣಕ್ಕೆ ಆಟೋದಲ್ಲಿ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಈ ವೇಳೆ ಆಟೋ ಹತ್ತಿದ ಆರೋಪಿಗಳು ಯುವಕ ಮತ್ತು ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಜೊತೆಯಾಗಿ ಪ್ರಯಾಣಿಸಿದ್ದಕ್ಕೆ ಪ್ರಶ್ನಿಸಿದ್ದಾರೆ. ಸಂತ್ರಸ್ಥ ಮೂವರೂ ಕೇರಳಕ್ಕೆ ತೆರಳಿದ್ದು, ಆಟೋ ಚಾಲಕನ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು.




