
Exclusive | ಬೀದರ್ ನಲ್ಲಿ ರಂಗೇರಿದ ಬಿಜೆಪಿ ಒಳ ರಾಜಕೀಯ ಸ್ವ ಪಕ್ಷದವರಿಂದಲೇ ಖೂಬಾ ಗೆ ಭಾರಿ ಕಂಟಕ
ಬೀದರ್ : ಲೋಕಾ ಕದನಕ್ಕೆ ಇನ್ನೇನು ಕೆಲವೇ ತಿಂಗಳು ಗಳು ಬಾಕಿ ಉಳಿದಿದ್ದು, ಬಿಜೆಪಿ ಪಾಳಯದಲ್ಲಿ ಟಿಕೆಟ್ ಅಕ್ಷಾಂಶ ಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಗೆ ದಿನಕ್ಕೆ ಒಬ್ಬರಂತೆ ಬೇಡಿಕೆಯಿದುತ್ತಿದ್ದು ಅಕ್ಷಾಂಶಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ.
ಹಾಗಾದರೆ ಬೀದರ್ ರಾಜಕೀಯ ಪಡಸಾಲೆಯಲ್ಲಿ ಏನ್ನಾಗುತ್ತಿದೆ ಎಂಬುವುದನ್ನು ಈ ಸ್ಟೋರಿಯಲ್ಲಿ ನೋಡೋಣ
ಗಡಿ ಜಿಲ್ಲೆ ಬೀದರ್ ಕಳೆದ ಒಂದು ದಶಕದಿಂದ ಬಿಜೆಪಿಯ ಭದ್ರಕೋಟೆ ಎಂದು ಗುರುತಿಸಿಕೊಂಡಿದೆ.ಆದರೂ ಕೂಡ ಕೇಂದ್ರ ಸಚಿವ ಹಾಗೂ ಹಾಲಿ ಬೀದರ್ ಸಂಸದ ಭಗವಂತ ಖೂಬಾ ಗೆ ಸ್ವಪಕ್ಷ ದವರಿಂದಲೆ ಭಾರಿ ಕಂಟಕ ಶುರುವಾಗಿದ್ದು,ಬಿಜೆಪಿಯಲ್ಲಿ ದಿನೇ ದಿನೇ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ನಗರ ಖಾಸಗಿ ಹೋಟೆಲ್ ನಲ್ಲಿ ನಡೆದ ಅಟಲ್ ಜಿ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕರು ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಹುಮನಬಾದ್ ನ ಮಾಜಿ ಶಾಸಕ ಸುಭಾಸ್ ಕಲ್ಲೂರು ಮತ್ತು 2023 ರ ವಿಧಾನ ಸಭಾ ಚುನಾವಣೆಯ ಬೀದರ್ ಉತ್ತರ ಕ್ಷೇತ್ರದ ಟಿಕೇಟ್ ಅಕ್ಷಾಂಶ ಗುರುನಾಥ ಕೊಳ್ಳುರ ಹಾಗೂ ಹಾವಗಿ ಮಠದ ಶಂಭು ಲಿಂಗ ಶ್ರೀಗಳು ಕೂಡ ಪಕ್ಷದ ಹೈ ಕಮಾಂಡ್ ಮನವೊಲಿಸುವ ಪ್ಲಾನ್ ಮಾಡುತ್ತಿದ್ದಾರೆ
*ಸಂಸದರ ಮೇಲೆ ಶಾಸಕರ ಮುನಿಸು*
*ತವರು ಕ್ಷೇತ್ರ ಔರಾದ ನಲ್ಲಿ ಖೂಬಾ ಅಪ್ತರಿಂದ ಪಕ್ಷ ವಿರೋಧಿ ಚಟುವಟಿಕೆ*
*ಮಾಜಿ ಸಚಿವ ಪ್ರಭು ಚವ್ಹಾಣ್ ಮತ್ತು ಶಾಸಕ ಶರಣು ಸಲಗಾರ ಜೊತೆ ಕೇಂದ್ರ ಸಚಿವರ ವೈ ಮನಸ್ಸು*
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಔರಾದ ಮತಕ್ಷೇತ್ರದಲ್ಲಿ ಶಾಸಕ ಪ್ರಭು ಚವಾಣ್ ಅವರ ಟಿಕೆಟ್ ಕೈ ತಪ್ಪಿಸಲು ಹಾಗೂ ಚುನಾವಣೆಯಲ್ಲಿ ಸೋಲಿಸಲು ಖೂಬಾ ಅಪ್ತರಿಂದ ಭಾರಿ ಕಸರತ್ತು ನಡೆದಿತ್ತು ಇದರ ಹಿನ್ನಲೆ ಚುನಾವಣೆಯ ಗೆಲುವಿನ ನಂತರ ಕಣ್ಣೀರ್ ಹಾಕುತ್ತಾ ಖೂಬಾ ವಿರುದ್ಧ ಆಕ್ರೋಶ ಹೊರಹಾಕಿದ್ದರು,ಅದೇ ರೀತಿ ಬಸವಕಲ್ಯಾಣ ಶಾಸಕ ಶರಣು ಸಲಗಾರ ಕೂಡ ಖೂಬಾ ಮೇಲೆ ಮುನಿಸಿಕೊಂಡಿದ್ದು ಮರಾಠ ಸಮಾಜದ ನಾಯಕರಿಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಖೂಬಾ ವಿರುದ್ಧ ಸಡ್ಯಂತ್ರ ಹೂಡುತ್ತಿದ್ದಾರೆ.
ಲೋಕ ಸಮರಕ್ಕೆ ದೇಶದಲ್ಲಿ ಆಯಾ ರಾಜಕೀಯ ಪಕ್ಷಗಳು ಸಮೀಕರಣ ಸಿದ್ದಪಡಿಸಿಕೊಳ್ಳುತ್ತಿದ್ದು,ಬಿಜೆಪಿ ಪಕ್ಷ ಕೂಡ ಗೆಲುವು ಕುದುರೆಗಳಿಗೆ ಮನೆ ಹಾಕುವ ಪ್ಲಾನ್ ಮಾಡುತ್ತಿದ್ದು ಸ್ವ ಪಕ್ಷದ ಶಾಸಕರು ಮತ್ತು ಹಿರಿಯರ ಕೆಂಗಣ್ಣಿಗೆ ಗುರಿಯಾಗಿರುವ ಖೂಬಾ ಗೆ ಈ ಬಾರಿ ಲೋಕಸಭಾ ಟಿಕೆಟ್ ಸಿಗುತ್ತಾ ಅಥವಾ ಹೊಸಬರಿಗೆ ಮಣೆ ಹಾಕುತ್ತಾರ ಕಾದು ನೋಡಬೇಕಾಗಿದೆ.
ಹನಮಂತ ದೇಶಮುಖ
THG ಬೀದರ್




