Udupi

ಉಡುಪಿ | ನಡು ರಾತ್ರಿಯಲ್ಲಿ ಅಲೆದಾಡುವಾತನ ರಕ್ಷಣೆ; ಸೂಚನೆ

ಉಡುಪಿ, ಜ.1; ಕರಂಬಳ್ಳಿಯಲ್ಲಿ ಮಾಜಿ ಶಾಸಕರ ಮನೆ ಸನಿಹ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ರವಿವಾರ ನಡೆದಿದೆ. ಕಾರ್ಯಚರಣೆಗೆ ಆಟೋ ಚಾಲಕ ಅಬಿದ್ ಸಹಕರಿಸಿದ್ದಾರೆ.

ರಕ್ಷಿಸಲ್ಪಟ್ಟ ಯುವಕ ಪರಿಸರದಲ್ಲಿ ತಡರಾತ್ರಿಯವರೆಗೆ ಸುತ್ತಾಡುವುದು, ಹಗಲು ಹೊತ್ತಿನಲ್ಲಿ ಗಿಡಗಂಟಿಗಳು ಬೆಳೆದಿರುವ ಪೊದೆಯೊಳಗೆ ಅವಿತುಕೊಳ್ಳಿತ್ತಿರುವುದನ್ನು ಕಂಡು ಸ್ಥಳೀಯರು ಭೀತಿಗೊಳಗಾಗಿದ್ದರು. ಯುವಕ ಮಾನಸಿಕ ವ್ಯಾಧಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ದಾಖಲು ಪ್ರಕ್ರಿಯೆ ನಡೆಸುವಾಗ ಹೆಸರು ಕಿಶೋರ್ (28 ವ) ಎಂದು ಹೇಳಿಕೊಂಡಿದ್ದು, ವಿಳಾಸ ತಿಳಿದುಬಂದಿಲ್ಲ. ಹೊರ ರಾಜ್ಯದ ನಿವಾಸಿಯೆಂದು ಶಂಕಿಸಲಾಗಿದೆ. ವಾರಸುದಾರರು ಡಾ.ಎ.ವಿ ಬಾಳಿಗ ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button