Featured StoryUdupi

ಬಿಜೆಪಿಯವರು ಮಾತ್ರ ದೇಣಿಗೆ ಕೊಟ್ಟದ್ದಾ, ಇದು ಪಕ್ಷದ ಮಂದಿರ ಹೇಗೆ ಸಾಧ್ಯ? – ಪೇಜಾವರ ಶ್ರೀ

ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಜನವರಿ 17 ಕ್ಕೆ ಬಾಲರಾಮನ ವಿಗ್ರಹ ಯಾವುದೆಂದು ಘೋಷಣೆ ಆಗುತ್ತದೆ. ಮೆರವಣಿಗೆ, ಸರಯೂ ನದಿಯ ಅಭಿಷೇಕದ ದಿನ ಮೂರ್ತಿ ಯಾವುದೆಂದು ಬಹಿರಂಗ ಆಗುತ್ತದೆ ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಟ್ರಸ್ಟಿಗಳು ಎಲ್ಲರೂ ಓಟ್ ಮಾಡಿದ್ದು, ಪೂರ್ಣ ಪರಿಶೀಲಿಸಿ ಅಂತಿಮವಾಗಿ ನಿರ್ಧಾರವಾಗುತ್ತದೆ. ಮೂರೂ ಮೂರ್ತಿಗಳು ಬಹಳ ಉತ್ತಮವಾಗಿದೆ. ಎರಡು ಕರಿ, ಒಂದು ಅಮೃತಶಿಲೆ ಮೂರ್ತಿ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ.

ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಆಹ್ವಾನ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಪೇಜಾವರ ಶ್ರೀ, ದೇಶದಲ್ಲಿ ರಾಮನ ಭಕ್ತರು ಸಂತರು ಮಹಂತರು ಬಹಳ ಇದ್ದಾರೆ. ಜನಪ್ರತಿನಿಧಿಗಳು, ದಾನಿಗಳು
ಭಕ್ತರೆಲ್ಲ ಆಮಂತ್ರಿತರೇಯಾಗಿದ್ದಾರೆ. ಪ್ರಾಣಪ್ರತಿಷ್ಠೆಗೆ ಪ್ರಾತಿನಿಧ್ಯ ಇಟ್ಟುಕೊಂಡು ಆಯ್ಕೆ ಮಾಡಲಾಗಿದೆ. ಆಹ್ವಾನ ಕೊಡಲಾಗಿದೆ ಎಂದರು.

ಸೀಮಿತ ಸ್ಥಳ ಇರೋದರಿಂದ ಎಲ್ಲರೂ ಭಾಗಿಯಾಗೋದು ಕಷ್ಟ. ಪ್ರತಿಷ್ಟಾಪನೆ ನಂತರ ಕೋಟ್ಯಾಂತರ ಭಕ್ತರು ಬಾಲರಾಮನ ದರ್ಶನಕ್ಕೆ ಅವಕಾಶ ಇದೆ. ನಾಡಿದ್ದು ಮೈದಾನದಲ್ಲಿ ಕಾರ್ಯಕ್ರಮ ಮಾಡಲು ಸಾದ್ಯವಿಲ್ಲ. ಮಂದಿರದ ಸ್ಥಳಾವಕಾಶ ಬಹಳ ಸೀಮಿತವಾಗಿದೆ ಎಂದು ಸ್ಪಷ್ಟನೆ ನೀಡಿದರು.

ಭಕ್ತರು ಯಾರೂ ತಪ್ಪು ತಿಳಿಯಬಾರದು. ಆಹ್ವಾನ ಇದ್ದವರು ಖಂಡಿತಾ ಭಾಗಿಯಾಗಬೇಕು. ಉಳಿದೆಲ್ಲರು ಮುಂದಿನ ದಿನದಲ್ಲಿ ಅಯೋಧ್ಯೆಗೆ ಬರಬೇಕು. ಅಯೋಧ್ಯೆಯಲ್ಲಿ ಅನೇಕ ಟೆಂಟ್, ಶೆಡ್ ತಯಾರಾಗಿದೆ.‌ಧನುರ್ಮಾಸ ಇರೋದರಿಂದ ಹೊರಗೆ ಮಲಗಲು ಸಾಧ್ಯವಿಲ್ಲ ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ

ಇನ್ನು ಅಯೋಧ್ಯೆಯಲ್ಲಿ ಇರುವುದು ಬಿಜೆಪಿ ರಾಮ ಮಂದಿರ ಎಂದಿರುವ ಮಾಜಿ ಸಚಿವ ಆಂಜನೇಯ ಉಡುಪಿಯಲ್ಲಿ ಪೇಜಾವರ ಮಠಾಧೀಶ ಪ್ರತಿಕ್ರಿಯೆ ನೀಡಿ, ” ರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ. ದೇವರು ಮಂದಿರದಲ್ಲಿ ಮಾತ್ರವಲ್ಲ ಎಲ್ಲರೊಳಗಿದ್ದಾನೆ. ಸಿದ್ದರಾಮಯ್ಯನೊಳಗೂ ಇದ್ದಾನೆ. ಬಿಜೆಪಿ ಮಂದಿರವೆಂದು ಯಾಕೆ ಹಾಗೆ ಅಂದುಕೊಳ್ಳಬೇಕು?. ನಾವು ಭಾರತೀಯರು ಈ ಮಂದಿರ ಎಲ್ಲರದ್ದೂ ಎಂದರು.

ಬಿಜೆಪಿಯವರು ಮಾತ್ರ ದೇಣಿಗೆ ಕೊಟ್ಟದ್ದಾ? ಇದು ಪಕ್ಷದ ಮಂದಿರ ಹೇಗೆ ಸಾಧ್ಯ? ಪಕ್ಷದ, ಸರಕಾರದ ದೇಣಿಗೆಯಿಂದ ಮಂದಿರ ಕಟ್ಟಿದ್ದಲ್ಲ. ಜಗತ್ತಿನ ಭಕ್ತರ ದೇಣಿಗೆಯಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದು ರಾಮ ಮಂದಿರದ ಟ್ರಸ್ಟಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿ ಕರಸೇವಕರ ಕೇಸ್ ರೀ ಓಪನ್ ಕುರಿತು ಮಾತನಾಡಿ, ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂದಿನ ಕರ ಸೇವಕರ ಬಂಧನ ಮಾಡಲಾಗಿದೆ. ಇದು ಹಿಂದೂಗಳನ್ನು ಮಟ್ಟ ಹಾಕುವ ಪ್ರಯತ್ನವೆಂದು ನಾವು ಭಾವಿಸುತ್ತೇವೆ. ಇಂತಹ ಕಾಲದಲ್ಲಿ ಈ ಬೆಳವಣಿಗೆ ಯಾಕೆ? ಎಂದು ಪ್ರಶ್ನಿಸಿದರು.

ಈ ಬೆಳವಣಿಗೆ ಕೋಲಾಹಲಕ್ಕೆ ಕಾರಣವಾಗುತ್ತದೆ. ಗೊಂದಲವಾಗದಂತೆ ಸರಕಾರ ಮುಂಜಾಗೃತೆ ವಹಿಸಬೇಕು ಎಂದರು.

ಪ್ರಾಣಪ್ರತಿಷ್ಠೆ ಜಗತ್ತಿನ ಉತ್ಸವ. ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರು ಇದ್ದಾರೆ. ಎಲ್ಲರ ಭಾವನೆ ಮನ್ನಿಸಿ ಗೌರವಿಸಿ ರಜೆ ಘೋಷಿಸಿ. ಉಡುಪಿ ಶಾಸಕರು ರಜೆ ಕೋರಿದ್ದಾರೆ ನಾನು ರಜೆಯನ್ನು ಆಗ್ರಹಿಸುತ್ತೇನೆ ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ, ಟ್ರಸ್ಟಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button