EconomyFeatured Story

$ 97 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಏಷ್ಯಾದ ಶ್ರೀಮಂತ ವ್ಯಕ್ತಿಯ ಸ್ಥಾನ‌ ಮರಳಿ ಪಡೆದ ಅದಾನಿ

ಹಿಂಡೆನ್‌ಬರ್ಗ್ ರಿಸರ್ಚ್‌ನ ಆರೋಪಗಳಿಗೆ ಉದ್ಯಮಿಗಳ ಸಮೂಹದ ವಿರುದ್ಧ ಯಾವುದೇ ಹೊಸ ತನಿಖೆಗಳ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲವು ದಿನಗಳ ನಂತರ ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿಯವರ ನಿವ್ವಳ ಮೌಲ್ಯವು ಒಂದು ದಿನದಲ್ಲಿ $ 7.7 ಶತಕೋಟಿ ಏರಿಕೆ ಕಂಡಿತು ಈ ಮೂಲಕ $ 97.6 ಶತಕೋಟಿಗೆ ಅವರ ಆಸ್ತಿ ಏರಿಕೆಯಾಗಿದೆ. ಈ ಮೂಲಕ ಮುಖೇಶ್ ಅಂಬಾನಿ ಯನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾದ ಅಂಬಾನಿ ಅವರು $ 97 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಕಡಿಮೆ ಅಂತರದಿಂದ ಹಿಂದುಳಿದಿದ್ದಾರೆ ಎಂದು ಸೂಚ್ಯಂಕ ತೋರಿಸುತ್ತದೆ.

 ಹಿಂಡೆನ್‌ಬರ್ಗ್‌ನ ಕಾರ್ಪೊರೇಟ್ ವಂಚನೆಯ ಆರೋಪಗಳನ್ನು ನಿರಾಕರಿಸಿದ ಹೊರತಾಗಿಯೂ, ಅದಾನಿ ಗ್ರೂಪ್ ಕಳೆದ ವರ್ಷ ಒಂದು ಹಂತದಲ್ಲಿ $150 ಶತಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿತು ಮತ್ತು ಹೂಡಿಕೆದಾರರು, ಸಾಲದಾತರು, ಸಾಲ ಮರುಪಾವತಿ ಮತ್ತು ನಿಯಂತ್ರಕ ಕಾಳಜಿಗಳನ್ನು ಸಮಾಧಾನಪಡಿಸುವ ಮೂಲಕ ಇದೀಗ ಮತ್ತೆ ಮೇಲೆದ್ದು ಬಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button