
Kodagu
ಮಾದಕದ್ರವ್ಯ ವ್ಯಸನದ ವಿರುದ್ದ ಅಭಿಯಾನ: ಕೊಡಗು ಎಸ್ಪಿಗೆ ಎಸ್.ಐ.ಓ ನಿಂದ ಆಹ್ವಾನ
ಮಾದಕದ್ರವ್ಯ ವ್ಯಸನದ ವಿರುದ್ದ ಜಮಾಅತೆ ಇಸ್ಲಾಮೀ ಹಿಂದ್ ಸಾಲಿಡಾರಿಟಿ ಗೋಣಿ ಕೊಪ್ಪ ಘಟಕ ಆಯೋಜಿಸುವ ಅಭಿಯಾನದ ಉದ್ಘಾಟನೆಗಾಗಿ ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್ ರವರನ್ನು ಆಹ್ವಾನಿಸಲಾಯಿತು.
ಮಾದಕದ್ರವ್ಯ ಮಾರಾಟ ಮಾಡುವ ಮತ್ತು ಉಪಯೋಗಿಸುವ ಜಾಲವನ್ನು ಮಟ್ಟ ಹಾಕಲು ಯಶಸ್ವಿಯಾಗಿ ಕಾರ್ಯ ನಿರ್ವಹಿಸುಹಿತ್ತಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಶ್ಲಾಘನೀಯ ಕಾರ್ಯದ ಬಗ್ಗೆ ಅಭಿನಂದಿಸಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ ಗೋಣಿ ಕೊಪ್ಪ ಸ್ಥಾನೀಯ ಅಧ್ಯಕ್ಷರು ತನ್ವೀರ್ ಅಹಮದ್ ಮಾದ್ಯಮ ವಕ್ತಾರ ಅಬ್ದುಲ್ಲಾ ಎಂ, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಗೋಣಿಕೊಪ್ಪ ಅಧ್ಯಕ್ಷರು ತಂಝೀಲ್ ,ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸರ್ ಸದಸ್ಯರಾದ ಝಯ್ಯಾನ್ ಅಹಮದ್ ವಕೀಲರು ಹಾಗೂ ಉದ್ಯಮಿಗಳಾದ ಸಮೀರ್ ಉಪಸ್ಥಿತರಿದ್ದರು




