
Accident NewsDakshina Kannada
ಸುಬ್ರಹ್ಮಣ್ಯ: ವಿದ್ಯುತ್ ಶಾಕ್ ಗೆ ಲೈನ್ಮ್ಯಾನ್ ಮೃತ್ಯು
ಸುಬ್ರಹ್ಮಣ್ಯ ( ದಿ ಹಿಂದುಸ್ತಾನ್ ಗಝೆಟ್)
ವಿದ್ಯುತ್ ಶಾಕ್ ಗೆ ಲೈನ್ಮ್ಯಾನ್ ಬಲಿಯಾದ ಘಟನೆ ಜ.೫ ರಂದು ಬಳ್ಳದಿಂದ ವರದಿಯಾಗಿದೆ.ಬಳ್ಳ ಗ್ರಾಮದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ಘಟನೆ ಸಂಭವಿಸಿದೆ.
ಹಾಸನ ಜಿಲ್ಲೆಯ ಹೊಳೆ ನರಸೀಪುರ ಸಿಗರನಹಳ್ಳಿ ರಘು ಎಸ್.ಆರ್. (32)ಮೃತ ಪಟ್ಟವರು.
ಸುಬ್ರಹ್ಮಣ್ಯ ಮೆಸ್ಕಾಂ ವ್ಯಾಪ್ತಿಯ ಪಂಜ ಸಬ್ ಡಿವಿಷನ್ನ ಬಳ್ಪ ಎಂಬಲ್ಲಿ ಅವರು ವಿದ್ಯುತ್ ದುರಸ್ಥಿ ನಡೆಸಲು ತೆರಳಿದ ವೇಳೆ ಘಟನೆ ಸಂಭವಿಸಿದೆ. ವಿದ್ಯುತ್ ಪರಿವರ್ತಕ ಬಳಿ ಮೃತ ದೇಹ ಪತ್ತೆಯಾಗಿದೆ. ಪ್ರಸ್ತುತ ಮಹಜರು ಸಲುವಾಗಿ ಮೃತದೇಹವನ್ನು ಆಸ್ಪತ್ರೆಗೆ ತರಲಾಗಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಆಗಮಿಸಿದ್ದು,ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




