CrimeUdupi

ಉಡುಪಿ: ಖಾಸಗಿ ರೆಸಿಡೆನ್ಸಿಯಲ್ಲಿ ವೈಶ್ಯವಾಟಿಕೆ – ಇಬ್ಬರು ವಶಕ್ಕೆ

ಉಡುಪಿ: ಖಾಸಗಿ ರೆಸಿಡೆನ್ಸಿಯೊಂದರಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌

ಜನವರಿ 5 ರಂದು ಮಂಜಪ್ಪ ಡಿ.ಆರ್,  ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಪೊಲೀಸ್ ಠಾಣೆ ಇವರಿಗೆ ಮೂಡನಿಡಂಬೂರು ಗ್ರಾಮದ ಮೀನು ಮಾರ್ಕೆಟ್ ಬಳಿ ಇರುವ ಕಾರ್ತಿಕ್ ಟವರ್‌ನಲ್ಲಿರುವ ಎಸ್.ಎಸ್ ರೆಸಿಡೆನ್ಸಿಯಲ್ಲಿ ಮಹಿಳೆಯರನ್ನು ಕರೆಸಿ ಅಕ್ರಮವಾಗಿ ವೇಶ್ಯಾವಾಟಿಕೆ  ನಡೆಸುತ್ತಿರುವುದಾಗಿ ದೊರೆತ  ಮಾಹಿತಿಯಂತೆ ದಾಳಿ ನಡೆಸಿದಾಗ ವೇಶ್ಯಾವಟಿಕೆಯಲ್ಲಿ ತೊಡಗಿದ್ದ ಮಧು ಹಾಗೂ ರೂಂ ಬಾಯ್ ಸುಕುಮಾರ್  ಇವರನ್ನು ವಶಕ್ಕೆ ಪಡೆದು, ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2024 , ಕಲಂ: 370 ಐಪಿಸಿ & 3,4,5,6,7 ಐಟಿಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button