
ಕುಂದಾಪುರ: ಬಸ್ರೂರು ಗ್ರಾಮದಲ್ಲಿ ಆಕಸ್ಮಿಕವಾಗಿ ದೇವರಕೋಣೆಯ ದೀಪದ ಬೆಂಕಿ ಮಹಿಳೆಯ ನೈಟಿಗೆ ತಗುಲಿ ಗಂಭೀರ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿಮಲಾ ಶೆಟ್ಟಿ (67) ಎಂಬವರು ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮಾರ್ಗೊಳಿಯಲ್ಲಿರುವ ಪ್ರೇಮಾ ಡಿ’ಸೋಜಾರವರ ಮನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದವರು ದಿನಾಂಕ 19.12.2023 ರಂದು 11:00 ಗಂಟೆಗೆ ದೇವರಿಗೆ ಹಚ್ಚಿದ ದೀಪದ ಬೆಂಕಿಯು ಆಕಸ್ಮೀಕವಾಗಿ ಧರಿಸಿದ್ದ ನೈಟಿಗೆ ತಾಗಿ ನಂತರ ಮೈಗೆ ತಾಗಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದವರು ದಿನಾಂಕ 06.01.2024 ರಂದು 6:15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/ 2024 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.




