
ಮಣಿಪಾಲ: ಆನ್ಲೈನ್ ವಂಚನ ಜಾಲಕ್ಕೆ ಸಿಲುಕುತ್ತಿರುವ ಜನ; ಆನ್ಲೈನ್ ಜಾಬ್ ಹೆಸರಿನಲ್ಲಿ ಲಕ್ಷಾಂತರ ರೂ ವಂಚನೆ
ಮಣಿಪಾಲ: ಇತ್ತೀಚಿಗೆ ಉಡುಪಿ ಜಿಲ್ಲೆಯಲ್ಲಿ ಆನ್ಲೈನ್ ವಂಚನಾ ಜಾಲಕ್ಕೆ ತುತ್ತಾಗಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿವಿಧ ರೂಪದಲ್ಲಿ ಜನರನ್ನು ವಂಚಿಸಿ ಆನ್ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಲಾಗುತ್ತಿದೆ.
ಇದೀಗ ಮಣಿಪಾಲದಲ್ಲಿ ಆನ್ಲೈನ್ ಕೆಲಸದ ಹೆಸರಿನಲ್ಲಿ ಸುಮಾರು 1.8 ಲಕ್ಷ ರೂಪಾಯಿಯನ್ನು ವಂಚಿಸಲಾಗಿದೆ.
ಜಾಸ್ಮಿ ಟಿ.ಕೆ, (34) ಬೆಳ್ತಂಗಡಿ ಇವರು ಮಣಿಪಾಲದ ವಿದ್ಯಾರತ್ನ ನಗರದ ಮನೆಯಲ್ಲಿರುವ ಸಮಯ ಫೇಸ್‌ಬುಕ್ ನೋಡುತ್ತಿದ್ದಾಗ On Line Job ಬಗ್ಗೆ ಜಾಹಿರಾತು ಬಂದಿದ್ದು, ಅದನ್ನು ಒಪ್ಪಿಕೊಂಡು ವಾಟ್ಸ್ ಆಪ್ ಮೂಲಕ ಮೊಬೈಲ್ ನಂಬರಿಗೆ ಓರ್ವ ವ್ಯಕ್ತಿ ಮೇಸೇಜ್ ಮೂಲಕ ಸಂಪರ್ಕಿಸಿ ಚಾಟಿಂಗ್ ಮಾಡಿ ಟೆಲಿಗ್ರಾಮ್ ಆಪ್‌ನಲ್ಲಿ ಸಂಪರ್ಕಿಸುವಂತೆ ತಿಳಿಸಿ ಲಿಂಕ್ ನ್ನು ನೀಡಿದ್ದು, ಟಾಸ್ಕ್ ನೀಡಿ ಪ್ರಾರಂಭದಲ್ಲಿ ರೂಪಾಯಿ. 150/- ಮತ್ತು ರೂಪಾಯಿ. 200/- ಖಾತೆಗೆ ಹಾಕಿದ್ದಾನೆ.ಬಳಿಕ ದಿನಾಂಕ 08/01/2024 ರಂದು ಟೆಲಿಗ್ರಾಮ್ ಆಪ್ ಮೂಲಕ ಸಂಪರ್ಕಿಸಿ ಟ್ರೇಡಿಂಗ್ ವಿವರ ನೀಡಿದ್ದು, ಆ ಬಳಿಕ ದಿನಾಂಕ 11/01/2024 ರ ಮದ್ಯಾಹ್ನ 16:00 ಗಂಟೆವರೆಗೆ ಒಟ್ಟು 1,88,000/- ರೂ ಹಣವನ್ನು Mahesh Jothe ಎಂಬಾತನ SBI ಬ್ಯಾಂಕ್ ಖಾತೆ ನಂಬ್ರ ಕ್ಕೆ ಜಮಾವಣೆ ಮಾಡಿದ್ದಾರೆ
ಆ ಬಳಿಕ ಆರೋಪಿಯು ಇನ್ನು1,50,000/- ರೂ ನೀಡಿದರೆ ಎಲ್ಲಾ ಹಣವನ್ನು ರೀಫಂಡ್ ಮಾಡುವುದಾಗಿ ತಿಳಿಸಿದ್ದು, ಟ್ರೇಡಿಂಗ್ ಆಪ್ ಎಂದು ನಕಲಿ ಅಪ್ ಮೂಲಕ ಹಣ ವರ್ಗಾವಣೆ ಮಾಡಿಸಿ ಹಣ ವಾಪಾಸು ನೀಡದೇ ಮೋಸ ಮಾಡಿದ್ದಾನೆ.. ಈ ಕುರಿತು ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 10/2024 ಕಲಂ: 66(C) (D) IT Act ಮತ್ತು 419 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯಿಂದ ಹಲವು ಮಂದಿ ಆನ್ಲೈನ್ ಜಾಲಾಗಳಿಗೆ ಮೋಸ ಹೋಗುತ್ತಿದ್ದು ಜನರು ಈ ಕುರಿತು ಎಚ್ಚರ ವಹಿಸಿ ಬ್ಯಾಂಕ್ ಸಂಬಂಧಿತ ಯಾವುದೇ ವ್ಯವಹಾರವನ್ನು ನೇರವಾಗಿ ಬ್ಯಾಂಕ್’ಗೆ ಭೇಟಿ ನೀಡಿ ಪರಿಹರಿಸಿಕೊಂಡರೆ ಇಂತಹ ಜಾಲಾಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಪೊಲೀಸ್ ಇಲಾಖೆಯು ಇಂತಹ ಪ್ರಜರಣವನ್ನು ಗಂಭೀರವಾಗಿ ಪರಿಗಣಿಸಿ ವಂಚಕರನ್ನು ಹೆಡೆಮುರಿ ಕಟ್ಟಬೇಕಾದ ಅನಿವಾರ್ಯತೆ ಇದೆ.




